Header Ads
Header Ads
Header Ads
Breaking News

ಕ್ರಾಂತಿ ಮಾಡದೇ ಶಾಂತಿಯಿಂದ ಸಮಾಜ ಬದಲಾಯಿಸಿ ಸುಳ್ಯದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

 ಸಮಾಜದಲ್ಲಿ ಅಶಾಂತಿ, ಕ್ರೌರ್ಯ, ಭ್ರಷ್ಟಾಚಾರ ಹೆಚ್ಚಾಗುವುದರಿಂದ ಸಮಾಜ ವಿನಾಶದೆಡೆಗೆ ಸಾಗುತ್ತದೆ. ತೃಪ್ತಿ ಮತ್ತು ಮಾನವೀಯತೆ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಅವರು ಡಾ|ಕುರುಂಜಿ ವೆಂಕಟ್ರಮಣ ಗೌಡರ 89ನೇ ಜಯಂತ್ಯೋತ್ಸವ ಅಂಗವಾಗಿ ನಡೆದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಿರಿಯ ಸಾಧಕರಿಗೆ ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ನೀಡಿ, ಮಾತನಾಡಿದರು.
ಅಶಾಂತಿ, ಕೌರ್ಯಗಳ ಮೂಲಕ ಕ್ರಾಂತಿ ಮಾಡದೇ ಮಾನವೀಯತೆಯ ಮೂಲಕ ಶಾಂತಿಯಿಂದ ಸಮಾಜ ಬದಲಾಯಿಸಬೇಕುಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕಾನೂನು ತಜ್ಞ ತುದಿಯಡ್ಕದ ಡಾ|ಡಿ.ಆರ್ ಸುಬ್ರಹ್ಮಣ್ಯ ಹಾಗೂ ಶಿಕ್ಷಣ ತಜ್ಞ, ಅಂಕಣಕಾರ, ಸಾಹಿತಿ ಡಾ|ರೇಫಾ| ಪ್ರಶಾಂತ್ ಮಾಡ್ತಾ ಇವರಿಗೆ ಕೆವಿಜಿ ಸಾಧನಾ ಶ್ರೀ ಪ್ರಶಸ್ತಿಯನ್ನು ಸಂತೋಷ್ ಹೆಗ್ಡೆಯವರು ನೀಡಿ ಸನ್ಮಾನಿಸಿದರು.ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ ಪೇರಾಲು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಕೆವಿಜಿ ಸುಳ್ಯ ಹಬ್ಬ ಸಮಿತಿಯ ಸಂಚಾಲಕ ಸಂತೋಷ್ ಮಡ್ತಿಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply