Header Ads
Header Ads
Breaking News

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಬೇಕರಿ ಮಾಲೀಕ ಸಹಿತ ಇಬ್ಬರ ಬಂಧನ

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಮುಖ ಬುಕ್ಕಿ, ಬೇಕರಿ ಅಂಗಡಿ ಮಾಲೀಕ ಸೇರಿದಂತೆ ಆತನ ಸಹಚರನನ್ನು ಸಿಸಿಬಿ ಪೊಲೀಸರ ತಂಡ ತಲಪಾಡಿ ಸಮೀಪದಲ್ಲಿ ನಿನ್ನೆ ಬಂಧಿಸಿದೆ. ವಿಟ್ಲ ಕನ್ಯಾನ ನಿವಾಸಿ ಸಂತೋಷ್ ಶೆಟ್ಟಿ (40) ಆತನ ಕಲೆಕ್ಷನ್ ಹುಡುಗನಾಗಿರುವ ಜೀವನ್ (22) ಬಂಧಿತರು.

ಸಂತೋಷ್ ಅವರು ಬೆಂದೂರ್‍ವೆಲ್ ಸಮೀಪ ಸ್ಕಂದ ಬೇಕರಿ ಮಾಲೀಕರಾಗಿದ್ದಾರೆ. ಬಂಧಿತರಿಂದ ಮೊಬೈಲ್ ಆಪ್, ಕಂಪ್ಯೂಟರ್, ಕ್ರೇಟಾ ಕಾರು, ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಶೆಟ್ಟಿ ಲೊಕ್ಯಾಂಟೋ ಆಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತಲಪಾಡಿಯ ಮನೆಯೊಂದರಿಂದ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *