Header Ads
Header Ads
Header Ads
Breaking News

ಕ್ರಿಸ್ಮಸ್ ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವ ಉಡುಪಿ : ಕೇಕ್ ಮಿಕ್ಸಿಂಗ್‍ನಲ್ಲಿ ಭಾಗವಹಿಸಿದ ಶಾಲಾ ಮಕ್ಕಳು

ಹಲವು ಬಗೆಯ ಡ್ರೈಫ್ರುಟ್ಸ್, ವೈನ್, ವಿಸ್ಕಿ ಹೀಗೆ ಎಲ್ಲವನ್ನೂ ಸೇರಿಸಿ ಮಿಶ್ರಣ ಮಾಡುವ ಕೆಲಸದಲ್ಲಿ ಕೆಲವರು ತೊಡಗಿಕೊಂಡಿದ್ದರು. ಇದು ಮುಂಬರುವ ಹಬ್ಬಕ್ಕೆ ತಯಾರಿ ಅಂತೂ ಸತ್ಯ. ಯಾವ ಹಬ್ಬಕ್ಕಾಗಿ ಇಂತಹ ತಯಾರಿಗಳು ಅಂತ ನಿಮಗೆ ಆಶ್ಚರ್ಯ ಆಗಬಹುದು ಇಲ್ಲಿದೆ ನೋಡಿ ವಿಶೇಷ ವರದಿ.

 ಉಡುಪಿಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಿಸಲಾಗುತ್ತದೆ. ಕ್ರಿಸ್ಮಸ್ ಅಂದರೆ ನೆನಪಾಗುವುದೇ ರುಚಿಕರವಾದ ಕೇಕ್‍ಗಳು. ಕ್ರಿಸ್ಮಸ್ ಗೆ ಒಂದು ತಿಂಗಳು ಇದೆ ಎನ್ನುವಾಗಲೇ ಹಬ್ಬದ ತಯಾರಿ ನಡೆಯುತ್ತದೆ. ಅದರಲ್ಲೂ ಕೇಕ್‍ಗಳನ್ನು ತಯಾರಿಸಲು ಹಣ್ಣುಗಳ ಮಿಶ್ರಣ ಕಾರ್ಯವಂತೂ ಪ್ರತಿಷ್ಟಿತ ಹೊಟೇಲ್‍ಗಳಲ್ಲಿ ನಡೆಯುವುದುಂಟು. ಅಂತಹ ಒಂದು ತಯಾರಿ ಉಡುಪಿಯ ಲೆಗಾಡೋ ಹೊಟೇಲ್ ನಲ್ಲಿ ನಡೆಸಿ ಗಮನ ಸೆಳೆದಿದ್ದಾರೆ. ಉಡುಪಿಯ ಶಾಲಾ ಮಕ್ಕಳಿಗೆ ಕೇಕ್ ಮಿಕ್ಸಿಂಗ್ ಬಗ್ಗೆ ತಿಳಿಸಲು ಹಾಗೂ ಅದರಲ್ಲಿ ಭಾಗವಹಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಸುಮಾರು 10ಕ್ಕೂ ಅಧಿಕ ಮಕ್ಕಳು ಈ ಕೇಕ್ ಮಿಕ್ಸಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಈ ಹಣ್ಣುಗಳ ಮಿಶ್ರಣದಲ್ಲಿ ಸುಮಾರು 260 ಕ್ಕೂ ಅಧಿಕ ಪಿಸ್ತಾ, ಬಾದಾಮ್, ದ್ರಾಕ್ಷಿ, ಗೋಡಂಬಿ ಮೊದಲಾದ ಒಣ ಹಣ್ಣುಗಳನ್ನು ಬಳಸಲಾಗಿದೆ ಇದರ ಜೊತೆಗೆ ವೈನ್, ರೆಡ್ ವೈನ್, ಬ್ರ್ಯಾಂಡಿ, ವಿಸ್ಕಿ, ದ್ರಾಕ್ಷಾರಸ, ಕಿತ್ತಳೆ ರಸದೊಂದಿಗೆ ಮಿಶ್ರಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅನೇಕ ಸ್ಪಧೇಯನ್ನೂ ಹಮ್ಮಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ ಕ್ರಿಸ್ಮಸ್‍ಗೆ ಈಗಾಗಲೇ ತಯಾರಿಗಳು ನಡೆಯುತ್ತಿದ್ದು ಕ್ರಿಸ್ಮಸ್ ವಿನೂತನ ಕೇಕ್ ಗಳಿಗಾಗಿ ಹಣ್ಣುಗಳ ಮಿಶ್ರಣ ಕಾರ್ಯವೂ ಭರದಿಂದ ಸಾಗಿದೆ. ಕ್ರಿಸ್ತನ ಹಬ್ಬಕ್ಕೆ ಜನರೂ ಎದುರು ನೋಡುತ್ತಿದ್ದಾರೆ. ಪ್ರಮುಖ ಹೊಟೇಲ್‍ಗಳೂ ಸಹ ಕೇಕ್ ಮಿಕ್ಸಿಂಗ್ ಕಾರ್ಯದಲ್ಲಿ ನಿರತವಾಗಿದೆ.

Related posts

Leave a Reply

Your email address will not be published. Required fields are marked *