Header Ads
Header Ads
Header Ads
Breaking News

ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ ಧರ್ಮಗುರುಗಳು : ಕಾರ್ಕಳದ ಸಂತ ಲಾರೆನ್ಸ್ ಚರ್ಚ್‌ನ ಧರ್ಮಗುರು ಫಾ. ರೊಯ್ ಲೋಬೊ

ಸಂತ ಲಾರೆನ್ಸ್ ಬಸಿಲಿಕಾ ಅತ್ತೂರು ಕಾರ್ಕಳ ಇದರ ಸಹಾಯಕ ಧರ್ಮಗುರುಗಳಾದ ಫಾದರ್ ರೊಯ್ ಲೋಬೊ ತಮ್ಮ ಕಚೇರಿಯಲ್ಲಿ ಕ್ರಿಸ್ಮಸ್ ಹಬ್ಬದ ಕ್ರಿಸ್ಮಸ್ ಹಬ್ಬದ ಶುಭಾಶಯ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಯೇಸುಕ್ರಿಸ್ತನು ಬೆತ್ಲಹೆಮ್‌ನಲ್ಲಿ ಅತಿ ಬಡಕುಟುಂಬದಲ್ಲಿ ಜನಿಸಿದ್ದರು. ಯೇಸು ಕ್ರಿಸ್ತರು ಮೊದಲು ೩೦ ವರ್ಷ ತಂದೆಗೆ ಸಹಾಯ ಮಾಡಿದರು. ನಂತರದ ಮೂರು ವರ್ಷಗಳಲ್ಲಿ ಅವರ ಸರಳ ತತ್ವಗಳನ್ನು ಜಗತ್ತಿಗೆ ಸಾರಿದರು. ಎಲ್ಲರನ್ನೂ ಪ್ರೀತಿಸು, ಶತ್ರುಗಳನ್ನು ಕ್ಷಮಿಸು, ಎಲ್ಲರಿಗೂ ಒಳಿತನ್ನು ಬಯಸು, ಇದು ಅವರ ಸರಳತತ್ವಗಳಾಗಿದ್ದವು. ನಮ್ಮ ಜೀವನದಲ್ಲಿ ಸರಳತೆಯನ್ನು ಅಳವಡಿಸಬೇಕು, ನಾವು ಏಸುಕ್ರಿಸ್ತನ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ನಾವು ನಮ್ಮ ಜೀವನದಲ್ಲಿ ಶಾಂತಿ ಹಾಗೂ ಸಮಾಧಾನವನ್ನು ಅಳವಡಿಸಿ ಯೇಸುವಿನ ತತ್ವಗಳನ್ನು ಅನುಸರಿಸಬೇಕು, ಮತ್ತು ಈ ಸಲದ ಯೇಸುಕ್ರಿಸ್ತನ ಹುಟ್ಟುಹಬ್ಬದಲ್ಲಿ ನಮಗೆಲ್ಲ ಶಾಂತಿ, ನೆಮ್ಮದಿ, ಆರೋಗ್ಯ ಲಭಿಸಲಿ ಎಂದು ಧರ್ಮ ಗುರುಗಳು ಹೇಳಿದರು.

Related posts

Leave a Reply

Your email address will not be published. Required fields are marked *