Header Ads
Breaking News

ಕ್ರಿಸ್‌ಮಸ್ ಸಂಭ್ರಮ : ಮಂಗಳೂರಿನ ರೊಝಾರಿಯೊ ಕೆಥೆಡ್ರಲ್‌ನಲ್ಲಿ ಸಂಭ್ರಮದ ಬಲಿಪೂಜೆ

ಏಸು ಕ್ರಿಸ್ತರ ಜನನದ ಹಬ್ಬವಾದ ‘ಕ್ರಿಸ್‌ಮಸ್’ನ ಮುಂಚಿನ ದಿನವಾದ ಮಂಗಳವಾರ ರಾತ್ರಿಯನ್ನು ಕ್ರೈಸ್ತರು ಕ್ರಿಸ್‌ಮಸ್ ಜಾಗರಣೆಯ ಮೂಲಕ ಸಂಭ್ರಮಿಸಿದರು. ನಗರ ಸಹಿತ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನಡೆದವು.ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚರ್ಚ್‌ಗಳ ಮತ್ತು ಕ್ರೈಸ್ತರ ಮನೆಯ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿತ್ತು. ತಾರೆ ಗಳನ್ನು ನೇತು ಹಾಕಲಾಗಿತ್ತು. ಕ್ರಿಸ್‌ಮಸ್ ಗೀತೆಗಳು ಆಚರಣೆಗೆ ವಿಶೇಷ ಕಳೆ ನೀಡಿತ್ತು.ಕ್ರಿಸ್‌ಮಸ್ ತಾತಾ ‘ಸಾಂತಾಕ್ಲಾಸ್’ ಆಗಮನ ವಿಶೇಷ ಆಕರ್ಷಣೆಯಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡಿದ್ದರು. ಬಲಿ ಪೂಜೆಯ ಬಳಿಕ ಕ್ರೈಸ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಕೇಕ್‌ಗಳನ್ನು ಹಂಚಿಕೊಂಡರು.

ಮಂಗಳೂರಿನ ರೊಝಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಧರ್ಮಪ್ರಾಂತದ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನ ಸಂದೇಶ ನೀಡಿದರು.

Related posts

Leave a Reply

Your email address will not be published. Required fields are marked *