Header Ads
Header Ads
Breaking News

ಕ್ರೀಡಾಲೋಕದಲ್ಲಿ ಹೊಸತನವನ್ನು ತಂದ ವೆಂಕಟ್ರಮಣ ಸ್ಪೋರ್ಟ್ಸ್‌ಕ್ಲಬ್

ಕ್ರೀಡೆಗಳು ಕೇವಲ ಮನೋರಂಜನೆಗೆ ಸೀಮಿತವಾಗಿದ್ದ ಒಂದು ಕಾಲವಿತ್ತು ಆದರೆ ಈಗ ಎಲ್ಲಾ ಕ್ರೀಡೆಗಳು ವ್ಯಾಪಾರೀಕರಣವಾಗಿದೆ ಕ್ರೀಡಾಪಟುಗಳು ತಪ್ಪು ದಾರಿ ಹಿಡಿಯುತ್ತಿದ್ದಾರೆ ಇದಕ್ಕೆಲ್ಲ ಕಾರಣ ಬಹುಮಾನದ ರೂಪದಲ್ಲಿ ಸಿಗುವ ನಗದು ಆದರೆ ಉದ್ಯಾವರ ವೆಂಕಟ್ರಮಣ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಅಕ್ಕಿ ನೀಡುವ ಮೂಲಕ ಕ್ರೀಡಾಲೋಕದಲ್ಲಿ ಹೊಸತನವನ್ನು ತಂದಿದ್ದಾರೆ ಈ ಬಗ್ಗೆ ವರದಿಯನ್ನು ನೋಡೋಣ…
 ಕ್ರೀಡೆ ಎಂಬುದು ನಮ್ಮ ಸಂತೋಷಕ್ಕೆ ಮತ್ತು ಸಂಘಟನೆ ಗೋಸ್ಕರ ಆಯೋಜನೆ ಮಾಡಲಾಗಿತ್ತು ಆದರೆ ಈಗ ನಡೆಯುವ ಎಲ್ಲಾ ಕ್ರೀಡೆಗಳು ಕೇವಲ ವ್ಯಾಪಾರಿಕರಣ ಆಗಿದೆ ಕ್ರೀಡೆಯ ಹೆಸರಲ್ಲಿ ಧನ ಸಂಗ್ರಹಿಸಿ ದುಂದುವೆಚ್ಚ ಮಾಡಿ ಗೆಲುವು ಸಾಧಿಸಿದ ತಂಡಕ್ಕೆ ಸಾವಿರಾರು ನಗದು ರೂಪದಲ್ಲಿ ಬಹುಮಾನವನ್ನು ನೀಡಲಾಗುತ್ತದೆ ಇದರಿಂದ ಕ್ರೀಡಾಪಟುಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ

 ಹೌದು ಕ್ರೀಡಾಕ್ಷೇತ್ರದಲ್ಲಿ ಏನಾದರೂ ಹೊಸತನವನ್ನು ತರಬೇಕು ಕ್ರೀಡೆಯನ್ನು ಉಳಿಸಬೇಕೆಂಬ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಯ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್ ಬಹುಮಾನ ರೂಪದಲ್ಲಿ 1 ಟನ್ ಅಕ್ಕಿಯನ್ನು ಬಹುಮಾನದ ರೂಪದಲ್ಲಿ ನೀಡಿದರು ಪ್ರತಿ ಸದಸ್ಯರಿಗೆ 25 ಕೆಜಿ ಅಕ್ಕಿ 2ನೇ ತಂಡಕ್ಕೆ 15 ಕೆಜಿ ಅಕ್ಕಿ ಬಹುಮಾನ ರೂಪದಲ್ಲಿ ನೀಡಿದರು.
 ಉದ್ಯಾವರ ಗ್ರಾಮ ಪಂಚಾಯತಿಯಲ್ಲಿ 20 ಕಿಂತಲೂ ಹೆಚ್ಚು ಕ್ರಿಕೆಟ್ ತಂಡಗಳಿದ್ದು ಪ್ರತಿ ಆದಿತ್ಯವಾರ ಉದ್ಯಾವರ ಗ್ರಾಮ ಪಂಚಾಯತಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತದೆ ಎಲ್ಲ ಕ್ರಿಕೆಟ್ ಪಂದ್ಯಾಟದಲ್ಲಿ ನಗದು ಬಹುಮಾನ ನೀಡಲಾಗುತ್ತದೆ ಆದರೆ ವೆಂಕಟ್ರಮಣ ಕ್ರಿಕೆಟ್ ಕ್ಲಬ್ ಹೊಸತನವನ್ನು ತಂದಿದೆ ಗೆಲುವು ಸಾಧಿಸಿದ ತಂಡಕ್ಕೆ ನಗದು ನೀಡುವ ಬದಲು ಅಕ್ಕಿಯನ್ನು ಬಹುಮಾನ ರೂಪದಲ್ಲಿ ನೀಡಿದ್ದಾರೆ ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ಏನೇ ಆಗಲಿ ತಂದೆ ಆಟದಲ್ಲಿ ಗೆಲುವು ಸಾಧಿಸಿ ಸಿಕ್ಕ ಅನ್ನದಲ್ಲಿ ಮೋಜು-ಮಸ್ತಿ ಮಾಡಿ ಸಮಯ ಹಾಳು ಮಾಡುವ ಇಂದಿನ ಯುವಕರಿಗೆ ಮಾದರಿಯಾಗಿದೆ.

Related posts

Leave a Reply

Your email address will not be published. Required fields are marked *