Header Ads
Header Ads
Breaking News

ಕ್ರೀಡೆಯಿಂದ ಮಾನಸಿಕ-ದೈಹಿಕ ಬೆಳವಣಿಗೆ ಸಾಧ್ಯ.. ಕಾಪು ಕ್ರೈಂ ಎಸ್ಸೈ ಕೆ. ಜಯಣ್ಣ ಹೇಳಿಕೆ…

ಪಾಠದೊಂದಿಗೆ ಪಾಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಾಗ, ಮಾನಸಿ ಹಾಗೂ ದೈಹಿಕವಾಗಿ ಬಲಾಢ್ಯರಾಗಲು ಸಾಧ್ಯ ಎಂಬುದಾಗಿ ಕಾಪು ಅಪರಾಧ ವಿಭಾಗದ ಪಿಎಸ್‌ಐ ಜಯಣ್ಣ ಹೇಳಿದ್ದಾರೆ.

ಅವರು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಂತ್ತೆ ಜೀವನದಲ್ಲೂ ಸೋಲು ಗೆಲುವು ಸರ್ವೇ ಸಾಮಾನ್ಯ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಜೀವನ ಕೂಡಾ ಸರಳವಾಗುತ್ತೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾತೃ ಸಂಸ್ಥೆಯ ಸಂಚಾಲಕ ಕೆ.ವಿ. ಆಚಾರ್ಯ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೋ. ವಿ.ಕೆ ಉದ್ಯಾವರ್, ವಿದ್ಯಾಧರ್ ಪುರಾಣಿಕ್, ಪ್ರೋಬೆಷನರಿ ಪಿಎಸೈಐ ಮಹಾದೇವ್, ಸಂತೋಷ್ ಕುಮಾರ್, ರೋಹಿಣಿ ಸುವರ್ಣ, ಒಪಿಲಿಯೋ ಕುಟಿನೋ, ದೈಹಿಕ ಶಿಕ್ಷಕರುಗಳಾದ ರವಿ ಕೊಲ್ಲಿ, ಜೀಮ್ಸ್ ಕರ್ಕಡ, ಸಕಲತ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *