Header Ads
Header Ads
Breaking News

ಕ್ರೈಸ್ತ ಬಾಂಧವರಿಗೆ ಇಂದು ಕೊಯ್ಲು ಹಬ್ಬದ ಸಂಭ್ರಮ. ದ.ಕ ಜಿಲ್ಲೆಯಲ್ಲಿ ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬದ ಸಡಗರ. ಧರ್ಮಗುರುಗಳಿಂದ ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿಕೆ.

 ಕ್ರೈಸ್ತ ಬಾಂಧವರಿಗೆ ಇಂದು ಕೊಯ್ಲು ಹಬ್ಬದ ಸಂಭ್ರಮ. ಮಾತೆ ಮರಿಯಮ್ಮರ ಹುಟ್ಟುಹಬ್ಬ. ತೆನೆ ಹಬ್ಬವನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು. ಜೊತೆಗೆ ಮಾತೆ ಮರಿಯಮ್ಮರ ಬಾಲ ರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆದರೆ, ಮನೆ ಮನೆಗಳಲ್ಲಿ ಸಸ್ಯಾಹಾರಿ ಊಟ, ಹೊಸ ಅಕ್ಕಿಯ ಹಾಲು ಪಾಯಸದೂಟದ ಸಂಭ್ರಮ. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದರು.

ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿದರು. ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಭಕ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಂಗಳೂರು ಧರ್ಮಾಧ್ಯಕ್ಷರಾದ ರೇವೆಂಡ್ ಫಾದರ್ ಅಲೋಶಿಯಸ್ ಪೌಲ್ ಅವರ ನೇತೃತ್ವದಲ್ಲಿ ರೊಜಾರಿಯೋ ಕೆಥೆಡ್ರೆಲ್ ಚರ್ಚ್‌ನಲ್ಲಿ ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು. ಇತ್ತ ನಗರದ ಬಿಜೈ ಚರ್ಚ್‌ನಲ್ಲೂ ಕ್ರೈಸ್ತಭಾಂದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Related posts

Leave a Reply