Header Ads
Breaking News

ಕ್ರೈಸ್ತ ಸಮುದಾಯ ವಿದ್ಯೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ! ಮೂಲ್ಕಿ-ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ!

ಕ್ರೈಸ್ತ ಸಮುದಾಯ ವಿದ್ಯೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಮೌಲ್ಯಾಧಾರಿತ ಶಿಕ್ಷಣದ ಚಿಂತನೆಗಳಿಂದ ಅಭಿವೃದ್ದಿ ಪರ ಸಮಾಜ ಕಟ್ಟಬಹುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಶುಕ್ರವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಶಾಲೆಯ ನೂತನ ಪ್ರಿ ಪ್ರೈಮರಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದು ಹಾಗೂ ಸುಸಂಸ್ಕೃತ ನಾಗರಿಕರನ್ನಾಗಿ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಪುತ್ತೂರು ಚರ್ಚ್‌ನ ಪ್ರಧಾನ ಧರ್ಮ ಗುರು ಫಾ| ಆಲ್ಫ್ರೆಡ್ ಜೆ ಪಿಂಟೊ ಆಶೀರ್ವಚನ ನೀಡಿ ಮಾತನಾಡಿದರು.

   

 

ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.ಕಿನ್ನಿಗೋಳಿ ಪ್ರಧಾನ ಧರ್ಮ ಗುರು ಫಾ| ವಿನ್ಸೆಂಟ್ ಎಫ್ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆ ಚರ್ಚ್‌ನ ಧರ್ಮ ಗುರು ಫಾ. ಪೌಲ್ ಸಿಕ್ವೇರಾ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply