Header Ads
Header Ads
Header Ads
Breaking News

ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ಟ್ಯಾಬ್ ಸರ್ಕಾರ ಟ್ಯಾಬ್ ನೀಡಿದರೆ ಶಿಕ್ಷಕರಿಗೆ ಸಹಕಾರಿ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಗೀತಾ ಶ್ಯಾನುಭೋಗ್ ಅಭಿಪ್ರಾಯ

ಉಳ್ಳಾಲ : ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತೀ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ಟ್ಯಾಬ್ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಸರಕಾರ ಟ್ಯಾಬ್ ನೀಡಿದರೆ ಶಿಕ್ಷಕರಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶಿಕ್ಷಣ ಗೀತಾ ಶ್ಯಾನುಭೋಗ್ ತಿಳಿಸಿದರು.

ಮುನ್ನೂರು ಗ್ರಾಮ ಪಂಚಾಯತ್‌ನ 2017-18 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ನೋಡೆಲ್ ಅಽಕಾರಿಯಾಗಿ ಭಾಗವಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಕಂಪ್ಯೂಟರ್ ಇಲ್ಲದೆ ಸೈಬರ್‌ನ ಮೊರೆ ಹೋಗಬೇಕಾದ ಅವಶ್ಯಕತೆಯಿದೆ ಎನ್ನುವ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಅವರು ಆಧುನಿಕ ತಂತ್ರeನವಾದ ಆಂಡ್ರಾಯ್ಡ್ ಮೊಬೈಲ್‌ನ ಉಪಯೋಗ ಹೆಚ್ಚಿನ ಶಿಕ್ಷಕರಿಗೆ ಆರಿವು ಇರುವುದರಿಂದ ಶಾಲೆಗೆ ಸಂಬಂಽಸಿದ ಕೆಲಸ ಕಾರ್ಯಗಳನ್ನು ನಡೆಸಲು ಸಹಕಾರಿಯಾಗುತ್ತದೆ.

ಈ ನಿಟ್ಟಿ ನಲ್ಲಿ ಕಂಪ್ಯೂಟರ್‌ನಂತಹ ಮೂಲಭೂತ ಸೌಕರ್ಯದಿಂದ ಕೊರತೆಯಿರುವ ಶಾಲೆಗಳಿಗೆ ಸಹಕಾರಿಯಾಗುವಂತೆ ಕ್ಲಸ್ಟರ್ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಟ್ಯಾಬ್‌ನ ವ್ಯವಸ್ಥೆ ಮಾಡುವುದರಿಂದ ಆವ್ಯಪ್ತಿಯ ಶಾಲಾ ಮುಖ್ಯ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಪಂಚಾಯತ್ ಅಧ್ಯಕ್ಷೆ ರೂಪಾ ಶೆಟ್ಟಿ ಸಭೆಯ ಅಧ್ಯಕ್ಷೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಆಲ್ಪ್ರೆಡ್ ವ್ಮಿ ಡಿ.ಸೋಜ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ವಿವಿಧ ಇಲಾಖೆಯ ಅ೨ಕಾರಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply