Header Ads
Breaking News

ಕ್ಲಾಸಿಕ್ ಫ್ಯೂಷನ್ ಮೆಟಲ್ಸ್ ಕೈಗಾರಿಕಾ ಸಂಸ್ಥೆಯ ರಜತ ರಂಜನ ಕಾರ್ಯಕ್ರಮ

ಮಂಗಳೂರಿನಲ್ಲಿ ಹೆಸರುವಾಸಿಯಾದಂತಹ ಕ್ಲಾಸಿಕ್ ಫ್ಯೂಷನ್ ಮೆಟಲ್ಸ್ ಕೈಗಾರಿಕಾ ಸಂಸ್ಥೆಯು ತಮ್ಮ ಎಲ್ಲಾ ಗ್ರಾಹಕರ, ಪೂರೈಕೆದಾರರ ಬೆಂಬಲ, ಸಹಕಾರದಿಂದ 25 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ರಜತ ರಂಜನ ಎಂಬ ಬೆಳ್ಳಿಹಬ್ಬವನ್ನು ಅಯೋಜಿಸಲಾಗಿದೆ ಎಂದು ಕ್ಲಾಸಿಕ್ ಫ್ಯೂಷನ್ ಮೆಟಲ್ಸ್ ಕೈಗಾರಿಕಾ ಸಂಸ್ಥೆಯ ಕೂಡೂರು ರಾಮಚಂದ್ರ ಭಟ್ ತಿಳಿಸಿದರು.


ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿಸೆಂಬರ್ 29 ರಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸಂಸ್ಥೆಯ ಅವರಣದಲ್ಲಿ ನಡೆಯಲಿದೆ ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತರಾದ ಡಾ.ಜಿ ಭೀಮೇಶ್ವರ ಜೋಶಿ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಮಾಜಿ ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ, ದ.ಕ ಸಹಕಾರಿ ಹಾಲು ಉತ್ವಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಅಜಿತ್ ಕಾಮತ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದರೆ ಎಂದರು. ಜೊತೆಗೆ ಪ್ರಸಿದ್ಧ ಗಾಯಕರಿಂದ ಗೀತ ಗುಂಜನ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಇನ್ನೂ ಗ್ರಾಹಕ ಹಿತೈಷಿಗಳೊಂದಿಗೆ ಗ್ರಾಹಕ ಸಂವಾದ ಎಂಬ ಸಮಾಲೋಚನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರುದ್ಧೀ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕ್ಲಾಸಿಕ್ ಫ್ಯೂಷನ್ ಮೆಟಲ್ಸ್ ಕೈಗಾರಿಕಾ ಸಂಸ್ಥೆಯ ಜನರಲ್ ಮ್ಯಾನೇಜರ್ ನಿರ್ಮಲಾ ಕುಂದರ್, ಕ್ಲಾಸಿಕ್ ಫ್ಯೂಷನ್ ಮೆಟಲ್ಸ್ ಕೈಗಾರಿಕಾ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಕಮಲಾಕ್ಷ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *