Breaking News

ಕ್ವೀನ್ಸ್‌ಲ್ಯಾಂಡ್ ಕಲ್ಲಿದ್ದಲು ಗಣಿಯಿಂದ ಗಲೀಜು, ಕಲುಷಿತ ನೀರು ಬಿಟ್ಟ ಅದಾನಿಗೆ ದಂಡ

ಡೆಬ್ಬಿ ಚಂಡಮಾರುತ ಬೀಸಿದನಂತರ, ಕ್ವೀನ್ಸ್ಲ್ಯಾಂಡ್ನಲ್ಲಿರುವ ಕಲ್ಲಿದ್ದಲು ಗಣಿಯಿಂದ ಕಲುಷಿತ ನೀರು ಬಿಡುಗಡೆ ಮಾಡಿ ಪರಿಸರಕ್ಕೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ಅದಾನಿ ಸಮೂಹಕ್ಕೆ ಇಲ್ಲಿನ ಸರ್ಕಾರ ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆ ಇದೆ.
ಅದಾನಿಯವರ ಅಬೊಟ್ ಪಾಯಿಂಟ್ ಕಲ್ಲಿದ್ದಲು ಬಂದರಿನಿಂದ ನಿಗದಿತ ಪ್ರಮಾಣಕ್ಕಿಂತ ೮ ಪಟ್ಟು ಹೆಚ್ಚು ಕಲುಷಿತ ನೀರು ಬಿಡುಗಡೆಯಾಗಿರುವ ಕುರಿತು ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕ್ವೀನ್ಸ್ಲ್ಯಾಂಡ್ ಸರ್ಕಾರ ಹೇಳಿದೆ.
ಪರಿಸರ ಹಾನಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಉಲ್ಲಂಘಿಸುವ ಕಂಪೆನಿಗಳಿಗೆ ಆಸ್ಟ್ರೇಲಿಯಾದ ಪರಿಸರ ಪ್ರಾಧಿಕಾರ ಭಾರಿ ಮೊತ್ತದ ದಂಡ ವಿಧಿಸುತ್ತದೆ. ಆದರೆ ಪರಿಸರಕ್ಕೆ ಹಾನಿ ಮಾಡಿರುವ ಆರೋಪವನ್ನು ಅಬೊಟ್ ಪಾಯಿಂಟ್ ಕಂಪೆನಿ ತಳ್ಳಿಹಾಕಿದೆ.

Related posts

Leave a Reply