Header Ads
Header Ads
Header Ads
Breaking News

ಕ್ಷೇತ್ರದಲ್ಲಿ ಮಿಥುನ್ ರೈಗೆ ಟಿಕೆಟ್ ನೀಡಿದರೂ ಬೆಂಬಲ ನೀಡುವೆ ಮೂಡಬಿದರೆಯಲ್ಲಿ ಐವನ್ ಡಿ”ಸೋಜಾ ಹೇಳಿಕೆ

 

ಮೂಡುಬಿದಿರೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಒಡಕಿಲ್ಲ. ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಜನಸ್ಪಂದನ ಕಚೇರಿ ತೆರೆದಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟದ್ದು. ಇಲ್ಲಿ ಮಿಥುನ್ ರೈಗೆ ಅವಕಾಶ ನೀಡಿದರೂ ಸಂತೋಷ. ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುವ ಮೂಲಕ ಬೆಂಬಲ ನೀಡುವೆ ಎಂದು ಎಂದು ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದರು.

ಜನಸ್ಪಂದನ ಕಛೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರೀತಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೆ ೪೨ರಷ್ಟು ಭ್ರಷ್ಟಾಚಾರದ ಕೇಸುಗಳಿವೆ. ಅಧಿಕಾರದಲ್ಲಿದ್ದಾಗ ೧೫ ಮಂದಿ ಬಿಜೆಪಿ ಮುಖಂಡರು ಜೈಲಿಗೂ ಹೋಗಿ ಬಂದಿದ್ದಾರೆ. ಈ ಕೇಸುಗಳಿಂದ ಮುಕ್ತರಾದ ಮೇಲೆ ಪರಿವರ್ತನಾ ಯಾತ್ರೆ ನಡೆಸಲಿ.
ಬಿಜೆಪಿ ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ್ದು, ಈಗ ಕೇಂದ್ರದಲ್ಲಿ ಮೂರು ವರ್ಷದಿಂದ ಆಡಳಿತ ನಡೆಸುತ್ತಿದ್ದರೂ ಜನ ಸಾಮಾನ್ಯರಿಗೆ ಪ್ರಯೋಜನವಾಗುವಂತಹ ಯಾವುದೇ ಕೆಲಸ ಮಾಡಿಲ್ಲ. ಈಗ ಪರಿವರ್ತನಾ ರ್‍ಯಾಲಿಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಕೆಲವೆಡೆಗಳಲ್ಲಿ ಕಾರ್‍ಯಕ್ರಮಗಳನ್ನೇ ರದ್ದುಪಡಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸಿದ ಸಭೆಗಳಲ್ಲೂ ಖಾಲಿ ಕುರ್ಚಿಗಳಿದ್ದವು. ದುಡ್ಡು, ಸೀರೆ ಹಂಚಿದ್ರೂ ಜನ ಬರ್‍ತಾ ಇಲ್ಲ. ಇದೊಂದು ವಿಫಲ ಯಾತ್ರೆಯಾಗುತ್ತಿದೆ. ಬಿಜೆಪಿಯವರು ಹತಾಶರಾಗಿದ್ದಾರೆ. ಮೋದಿ ವರ್ಷಕ್ಕೆ 2 ಲಕ್ಷ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರೂ ಅದು ಅನುಷ್ಠಾನಗೊಳ್ಳುತ್ತಿಲ್ಲ. ಮೋದಿಯವರ ಯಾವುದೇ ಯೋಜನೆಗಳು ಯಶಸ್ಸು ಕಾಣುತ್ತಿಲ್ಲ. ಹೀಗಾಗಿ, ಮೋದಿಯವರ ಮನಸ್ಸನ್ನು ಪರಿವರ್ತನೆ ಮಾಡಲು ಬಿಜೆಪಿಯವರು ದೆಹಲಿಗೆ ಯಾತ್ರೆ ಹೋಗಲಿ ಎಂದು ವ್ಯಂಗವಾಡಿದ ಅವರು ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಅಶೋಕ್, ಶೋಭಾ ಕರಂದ್ಲಾಜೆ ಸಹಿತ ಐದು ಬಾಗಿಲುಗಳಿವೆ. ಹೀಗಾಗಿ ಬಿಜೆಪಿ ಒಡೆದ ಮನೆಯಾಗಿದೆ ಎಂದರು.

ಕುಮಾರಸ್ವಾಮಿ ಯಾತ್ರೆ ಬಗ್ಗೆ ಪ್ರಶ್ನಿಸಿದಾಗ ಜೆಡಿ‌ಎಸ್ ಮೂರು ಜಿಲ್ಲೆಗಳಲ್ಲಿ ಮಾತ್ರ ಪ್ರಾಬಲ್ಯ ಹೊಂದಿದೆ. ಅವರು ನಮಗೆ ಸ್ಪರ್ಧಿಯೇ ಅಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ವಿಲ್ಫ್ರೆಡ್ ಮೆಂಡೋನ್ಸಾ, ಲಾಜರಸ್ ಡಿಕೋಸ್ತ, ಕೆಪಿಸಿಸಿ ಸದಸ್ಯ ಗುರುರಾಜ್, ತಾ.ಪಂ. ಮಾಜಿ ಸದಸ್ಯ ಪ್ರಕಾಶ್ ಪಿ. ನಾಮನಿರ್ದೇಶಿತ ಸದಸ್ಯ ಆಲ್ವೀನ್ ಮಿನೇಜಸ್, ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಹೆರಾಲ್ಡ್ ರೇಗೋ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply