Header Ads
Header Ads
Header Ads
Breaking News

ಕ್ಷೇತ್ರದ ಜನರಿಗೆ ಕುಡಿಯುವ ನೀರು ದೊರಕಬೇಕು ಮುಂದಿನ ಯೋಜನೆಗೆ ನೀಲಿನಕ್ಷೆ ತಯಾರಿ ಆಹಾರ ಸಚಿವ ಯು.ಟಿ. ಖಾದರ್ ಹೇಳಿಕೆ

ಈಗಾಗಲೇ ಕ್ಷೇತ್ರಾಭಿವೃದ್ಧಿ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ನಡೆಸಲಾಗಿದೆ, ಕ್ಷೇತ್ರದ ಜನರಿಗೆ 24 ಗಂಟೆಯೂ ಕುಡಿಯುವ ನೀರು ದೊರಕಬೇಕು ಎನ್ನುವ ಅಭಿಲಾಷೆಯಿದ್ದು, ಮುಂದಿನ ಯೋಜನೆಯಾಗಿ ನೀಲಿನಕ್ಷೆ ರೂಪಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು.

ಹರೇಕಳ ಗ್ರಾಮ ಸಮಿತಿ ಆಶ್ರಯದಲ್ಲಿ ಹರೇಕಳ ಕಡವಿನ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡಿದರು. ಹರೇಕಳ ಪಾವೂರು ಭಂಡಾರಮನೆ ಸಂಪರ್ಕ ರಸ್ತೆಗೆ ಸ್ಥಳೀಯರು ಜಮೀನು ಬಿಟ್ಟುಕೊಡಲು ಒಪ್ಪಿದ್ದು 60 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಗ್ರಾಮಕ್ಕೆ ವಿವಿಧ ಯೋಜನೆಯಡಿ ಬೋಟು ಜೆಟ್ಟಿ ಸಹಿತ ಅಭಿವೃದ್ಧಿ ಕೆಲಸ ನಡೆಸಲಾಗಿದ್ದು, ಸಣ್ಣ ಪುಟ್ಟ ಕೆಲಸಗಳಿಗೂ ತನ್ನನ್ನೇ ಕಾಯಬಾರದು ಎನ್ನುವ ನೆಲೆಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಕೋಟಿ ಅನುದಾನ ಪಂಚಾಯಿತಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಸದಸ್ಯರಾದ ಎಂ.ಪಿ.ಮಜೀದ್, ಅಬ್ದುಲ್ ಸತ್ತಾರ್, ಬಶಿ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply