Header Ads
Header Ads
Breaking News

ಖಂಡಕಾವ್ಯಗಳ ಕೆ.ಬಿ. ಸಿದ್ದಯ್ಯ ಇನ್ನಿಲ್ಲ : 80ರ ದಶಕದಲ್ಲಿ ದಲಿತ ಚಳುವಳಿಗಳಲ್ಲಿ ಗುರುತಿಸಿಕೊಂಡ ಸಿದ್ದಯ್ಯ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ (65) ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದಾರೆ. ಇತ್ತೀಚಿಗೆ ಹೆಬ್ಬೂರು ಹೋಬಳಿಯ ಸುಗ್ಗನ ಹಳ್ಳಿ-ಕೆಂಕೆರೆ ಬಳಿಯ ತೋಟಕ್ಕೆ ಹೋಗುವಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೆ.ಬಿ ಸಿದ್ದಯ್ಯ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ತೀವ್ರವಾಗಿ ರಕ್ತಸ್ರಾವವಾಗಿ ಶ್ವಾಸಕೋಶಕ್ಕೆ ಸೋಂಕು ತಗುಲಿದ್ದರಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ.
ಮಾಗಡಿ ತಾಲೂಕಿನವರಾದ ಕೆ.ಬಿ.ಸಿದ್ದಯ್ಯ, ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. 1970-80ರ ದಶಕದಲ್ಲಿ ದಲಿತ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ದಕ್ಕಲ ಕಥಾದೇವಿ, ಬಕಾಲ, ಗಲ್ಲೆಭಾನಿ ಸೇರಿದಂತೆ ಹಲವು ಖಂಡಕಾವ್ಯವನ್ನು ಸಿದ್ದಯ್ಯ ಅವರು ರಚಸಿದ್ದರು. ರಾಜ್ಯೋತ್ಸವ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

Related posts

Leave a Reply

Your email address will not be published. Required fields are marked *