Header Ads
Breaking News

ಖತಾರ್ ಇಂಡಿಯನ್ ಫ್ರೆಂಡ್ಸ್ ವತಿಯಿಂದ ಕಬಡ್ಡಿ ಫೆಸ್ಟ್ ಸೀಸನ್ 2

ಖತಾರ್ ಇಂಡಿಯನ್ ಫ್ರೆಂಡ್ಸ್ ವತಿಯಿಂದ ಕಬಡ್ಡಿ ಫೆಸ್ಟ್ ಸೀಸನ್ 2, ಅಲ್ ಜಝೀರಾ ಗ್ರೌಂಡ್‍ನ ಅಬು ಹಾಮೋರ್‍ನಲ್ಲಿ ನಡೆಯಿತು. ಖತಾರ್‍ನ ಬಂಟ್ಸ್ ಅಧ್ಯಕ್ಷ ದೀಪಕ್ ಶೆಟ್ಟಿ ರಿಬ್ಬನ್ ಕತ್ತಿರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಈ ಸಂದರ್ಭ ಖತರ್‍ನ ಐಸಿಸಿಯ ಆಡಳಿತ ಸಮಿತಿಯ ಸದಸ್ಯ ರಾಮಣ್ಣ ಶೆಟ್ಟಿ, ಖತಾರ್ ಕರ್ನಾಟಕ ಸಂಘದ ಸ್ಪೋರ್ಟ್ ಕಾರ್ಯದರ್ಶಿ ಅನಿಲ್ ಕುಮಾರ್ ಬೋಳೂರು, ಆಡಳಿತ ಸಮಿತಿ ಸದಸ್ಯ ದಿನೇಶ್ ಕುಮಾರ್, ಖತಾರ್ ಇಂಡಿಯನ್ ಫ್ರೆಂಡ್ಸ್‍ನ ಅಧ್ಯಕ್ಷ ನಿಸಾರ್ ಎನ್‍ಎಮ್, ಆಲ್ ಅಮೀನ್ ಗ್ರೂಪ್ ಅಧ್ಯಕ್ಷ ರಿಯಾಝ್ ಕಾಣಾ, ಹಾಗೂ ಶಖೀಲ್ ಸುಲೈಮಾನ್ ಅವರು ಉಪಸ್ಥಿತರಿದ್ರು.

ಕಾರ್ಯಕ್ರಮದಲ್ಲಿಅಂಪೈರ್ ಮೊಹಮ್ಮದ್ ಬೈಕೇಟ್, ದಕ್ಷಿಣ ಕನ್ನಡ ಜಿಲ್ಲೆಯ ಅಂತರಾಷ್ಟ್ರೀಯ ಆಟಗಾರ ಆಶಿಕ್ ಮಡಂತ್ಯಾರ್, ಖತಾರ್ ಇಂಡಿಯನ್ ಫ್ರೆಂಡ್ಸ್‍ನ ಸಕ್ರಿಯ ಸದಸ್ಯ ಮುಂಝಿರ್ ಸೋಕೆ ಇವರನ್ನೆಲ್ಲಾ ಸನ್ಮಾನಿಸಲಾಯಿತು.

ಇನ್ನು ಸಮಾರೋಪ ಸಮಾರಂಭದಲ್ಲಿ ಪಾಲೊಂಜಿ ಖತಾರ್‍ನ ಆಡಳಿತ ನಿರ್ದೇಶಕರಾದ ಚಿದಾನಂದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಗೌರವ ಅತಿಥಿಯಾಗಿ ಎಟಿಎಸ್ ಗ್ರೂಪ್‍ನ ಆಡಳಿತ ನಿರ್ದೇಶಕರಾದ ರವಿ ಶೆಟ್ಟಿ, ಪಂದ್ಯಾವಳಿಯ ಕಾರ್ಪೋರೇಟ್ ಪ್ರಾಯೋಜಕರಾದ ಅಬ್ದುಲ್ಲ ಮೊನು ಮೊಯಿದ್ದೀನ್ ಭಾಗವಹಿಸಿದ್ರು. ಹಾಗೆಯೇ ಅಂಪೈರ್ಸ್ ಮೊಹಮ್ಮದ್ ಬೈಕಟ್ಟೆ, ಸುದರ್ಶನ್ ಮತ್ತು ಯುಸುಫ್ ಬೈಕಟ್ಟೆ, ಕಮೆಂಟರೀಸ್ ಸವಾದ್ ಬೋಳಿಯಾರ್ ಮತ್ತು ನವೀನ್, ಸ್ಕೋರರ್ ಆಶ್ರಫ್ ಉಪಸ್ಥಿತರಿದ್ರು.

ಇನ್ನು ಈ ಪಂದ್ಯಾವಳಿಯಲ್ಲಿ ಖತಾರ್ ಇಂಡಿಯನ್ ಫ್ರೆಂಡ್ಸ್ ಮೊದಲನೇ ಸ್ಥಾನ, ಎಟಿಎಸ್ ತುಳುಕೂಟ ಎರಡನೇ ಸ್ಥಾನ, ಹಸನೆಸ್ಕೋ ಎ ತೃತೀಯ ಸ್ಥಾನ ಹಾಗೂ ಹಸೆನೆಸ್ಕೋ ಬ 4 ನೇ ಸ್ಥಾನವನ್ನ ಪಡೆದ್ರು. ಇನ್ನು ಮ್ಯಾನ್ ಆಫ್ ದಿ ಟೂರ್ನಮೆಂಟ್ ಆಗಿ ಆಸಿಫ್ ಬೈಕಟ್ಟೆ, ಬೆಸ್ಟ್ ರೈಡರ್ ಆಗಿ ಸಾಗರ್, ಉತ್ತಮ ದಾಳಿಗಾರನಾಗಿ ಶಹಾದ್ ಹಾಗೂ ಆಲ್ ರೌಂಡರ್ ಆಗಿ ಇಕ್ಕು ಕಲಾಪಾನ ಅವರು ಆಯ್ಕೆಗೊಂಡ್ರು.

Related posts

Leave a Reply

Your email address will not be published. Required fields are marked *