Header Ads
Header Ads
Header Ads
Breaking News

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುತ್ತಿರುವ ದುಬಾರಿ ಶುಲ್ಕ ಕುಂದಾಪುರದಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆರೋಗ್ಯ ಸೇವೆಗೆ ಸರ್ಕಾರಿ ಆಸ್ಪತ್ರೆ ಮೊರೆ ಹೋದ ಜನತೆ

ಕುಂದಾಪುರ: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುತ್ತಿರುವ ದುಬಾರಿ ಶುಲ್ಕಕ್ಕೆ ನಿಯಂತ್ರಣ ಹೇರುತ್ತಿರುವುದನ್ನ ಖಂಡಿಸಿ ನಡೆಯುತ್ತಿರುವ ಮುಷ್ಕರ ಹಿನ್ನೆಲೆ ಕುಂದಾಪುರದಲ್ಲಿ ಖಾಸಗಿ ಆಸ್ಪತ್ರೆಗಳು ಮುಷ್ಕರ ನಡೆಸಿದ ಪರಿಣಾಮ ಇಂದು ಕುಂದಾಪುರದಲ್ಲಿ ಆರೋಗ್ಯ ಸೇವೆಗೆ ಸರಕಾರಿ ಆಸ್ಪತ್ರೆಯನ್ನ ಸಾರ್ವಜನಿಕರು ಅವಲಂಬಿಸಿದ್ದರು.

ಶುಕ್ರವಾರ ಅಪಘಾತ ಪ್ರಕರಣ ಸೇರಿದಂತೆ ಕೆಲವು ತುರ್ತು ಚಿಕಿತ್ಸಾ ಸೇವೆಗಳಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗೆ ಮಣಿಪಾಲ ಮತ್ತು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಕುಂದಾಪುರ ತಾಲೂಕು ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ಇಂದು ಖಾಸಗಿ ಆಸ್ಪತ್ರೆಗಳ ಮುಷ್ಕರ ಹಿನ್ನೆಲೆ ನಮ್ಮ ಯಾವುದೇ ಸಿಬ್ಬಂದಿಗಳಿಗೆ ರಜೆಯನ್ನ ನೀಡಿಲ್ಲ. ಯಾವುದೇ ಸಮಸ್ಯೆ ಬಾರದೆ ಇರುವಂತೆ ನಾವು ಸರ್ವ ಸನ್ನದ್ದರಾಗಿದ್ದೇವೆ ಎಂದು ತಿಳಿಸಿದರು.

ಗಂಗೊಳ್ಳಿ ಭಾಗದ ಆಪತ್ಬಾಂದವ ಎಂದೇ ಖ್ಯಾತರಾದ ಇಬ್ರಾಹಿಂ ಗಂಗೊಳ್ಳಿ ತನ್ನ ಎರಡು ಆಂಬ್ಯುಲೆನ್ಸ್‌ಗಳೊಂದಿಗೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಮೊಕ್ಕಾ ಹೂಡಿದ್ದು ಯಾವುದೇ ತುರ್ತು ಸಂದರ್ಭ ತಕ್ಷಣ ಸೇವೆಗೆ ಅಥವಾ ತುರ್ತಾಗಿ ಆಸ್ಪತ್ರೆಗೆ ಸೇರಿಸಲು ನೆರವಾದರು.

ಕುಂದಾಪುರ ತಾಲೂಕು ಆಸ್ಪತ್ರೆ ಸರ್ವ ಸನ್ನದ್ದಾರಾಗಿದ್ದ ಹಿನ್ನೆಲೆ ಕುಂದಾಪುರದಲ್ಲಿ ಅಂತಹ ಸಮಸ್ಯೆ ತಲೆದೊರಿಲ್ಲ. ಇದೇ ರೀತಿ ಎಲ್ಲಾ ಸಂದರ್ಭಗಳಲ್ಲೂ ಸಾರ್ವಜನಿಕರ ನೆರವಿಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಬಂದರೆ ಖಾಸಗಿ ಆಸ್ಪತ್ರೆ ಲಾಭಿಯನ್ನ ಸಂಪೂರ್ಣ ತಡೆಗಟ್ಟಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Related posts

Leave a Reply