Header Ads
Breaking News

ಖಾಸಗಿ ಕಾರಿನಲ್ಲಿ ಶಬರಿಮಲೈ ಯಾತ್ರೆ : ಮಾಲಾಧಾರಿಗಳನ್ನು ತಡೆದ ಟೂರಿಸ್ಟ್ ಚಾಲಕರು

ಖಾಸಗಿ ಕಾರಿನಲ್ಲಿ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಟೂರಿಸ್ಟ್ ಚಾಲಕರು ಕಾರನ್ನು ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಬೈಂದೂರಿನ ಪಡುವರಿಯ ಏಳು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಖಾಸಗಿ ಇನ್ನೋವಾ ಕಾರಿನಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದರು. ಖಾಸಗಿ ವಾಹನದಲ್ಲಿ ಬಾಡಿಗೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಹಾಗೂ ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ ಸಂಘಟನೆಯ ಸದಸ್ಯರು ಶಾಸ್ತ್ರೀವೃತ್ತದಲಿ ಕಾರನ್ನು ಅಡ್ಡಗಟ್ಟಿ ಕುಂದಾಪುರ ಟ್ರಾಫಿಕ್ ಪೊಲೀಸರಿಗೊಪ್ಪಿಸಿದ್ದಾರೆ.ಈ ವೇಳೆಯಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್‍ನ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಗುರುರಾಜ್, ಉಡುಪಿ ಟ್ಯಾಕ್ಸಿ ಅಸೋಶಿಯೇಶನ್‍ನ ನಾಗರಾಜ್, ಅರುಣ್, ರತ್ನಾಕರ್,ಸಂತೋಷ, ಅಕ್ಷಯ್, ಸತೀಶ, ಶ್ರೀಧರ, ಅಶೋಕ್ ಗುಲ್ವಾಡಿ, ಸಂತೋಷ ಕೆ, ಪ್ರಶಾಂತ, ಕುಂದಾಫುರ ಪಾರಿಜಾತ ಟ್ಯಾಕ್ಸಿ ನಿಲ್ದಾಣದ ಚಾಲಕ-ಮಾಲಕರು ಇದ್ದರು.

Related posts

Leave a Reply

Your email address will not be published. Required fields are marked *