Breaking News

ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ, 7 ಜನ ಸಾವು. ಹಾಗೂ 25 ಜನರಿಗೆ ಗಾಯ

ಖಾಸಗಿ ಬಸ್ಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿ, 25 ಜನರಿಗೆ ಗಾಯಗಳಾದ ಘಟನೆ ಭಟ್ಕಳ ತಾಲೂಕಿನ ಅನಂತವಾಡಿ ರಾಷ್ಟ್ರ‍ೀಯ ಹೆದ್ದಾರಿ ಸಮೀಪ ಸಂಭವಿಸಿದೆ.
ಮಂಗಳೂರಿನಿಂದ ಹೊನ್ನಾವರ ಕಡೆ ಸಂಚರಿಸುತ್ತಿದ್ದ ಬಸ್ಸು, ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ವಿ.ಆರ್.ಎಲ್.ಬಸ್ಸ್ ಚಾಲಕ ಉಮೇಶ್ ವಾಲ್ಮೀಕಿ(35), ಟೆಂಪೋದಲ್ಲಿದ್ದ ಪಾಲಾಕ್ಷಿ(42), ಬೇಭಿ(38), ಸುಬ್ರಹ್ಮಣ್ಯ(15), ದಿವ್ಯಾ ಕುರ್ಡೇಕರ್(23),ಹಾಗೂ ಟೆಂಪೋ ಚಾಲಕ ನಾಗಪ್ಪ ಗಣಿಗಾರ್ ಮೃತಪಟ್ಟಿದ್ದಾರೆ. ಇನ್ನುಳಿದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಡುಪಿ ಮಣಿಪಾಲ್ ಆಸ್ಪತ್ರೆಗೆ ಹಾಗೂ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವರದಿ ; ಸುಶಾಂತ್ ಬೈಂದೂರು

Related posts

Leave a Reply