Header Ads
Header Ads
Breaking News

ಖಾಸಗಿ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಪರವಾನಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಾರತಮ್ಯ ಭಟ್ಕಳ ತಾಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಮನವಿ

 

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟದ ಪರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಪರವಾನಿಗೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತದಲ್ಲಿ ಕಡಿತ, ೨೦೦೬ರ ನಂತರ ನೇಮಕಾತಿಯಾದ ಅನುದಾನಿತ ಶಾಲಾ ನೌಕರರಿಗೆ ಪಿಂಚಣಿ, ವಿವಿಧ ಕಾಲೇಜುಗಳಲ್ಲಿ ಕಂಡು ಬರುವ ಹಲವು ಸಮಸ್ಯೆಗಳು ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಂಡು ಬರುವ ತಾರತಮ್ಯವನ್ನು ಹೋಗಲಾಡಿಸುವಂತೆ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟ ಭಟ್ಕಳ ತಾಲೂಕಾ ಘಟಕದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಜೀವನಾಡಿಗಳಾಗಿದ್ದು, ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹವನ್ನು ಕೈಗೊಂಡಿದೆ. ಶೈಕ್ಷಣಿಕ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಇತ್ತೀಚಿಗೆ ಸರ್ಕಾರದ ಶೈಕ್ಷಣಿಕ ನೀತಿ ಖಾಸಗಿ ಸಂಸ್ಥೆಗಳನ್ನು ಸಂಕಷ್ಟಕ್ಕೆ ನೂಕಿದೆ. ಈ ಹಿಂದೆ ೨೪-೧೦-೨೦೧೬ರಂದು ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದಿಂದ ಒಕ್ಕೂಟದ ಪದಾದಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಸೇರಿ ಬೇಡಿಕೆಗಳ ಕುರಿತು ತಕ್ಷಣ ಸ್ಪಂದಿಸುವಂತೆ ಕೋರಿಕೆ ಸಲ್ಲಿಸಲಾಗಿತ್ತು. ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಮತ್ತೆ ಮನವಿ ಸಲ್ಲಿಸಿದಾಗ ಪದಾಧಿಕಾರಿಗಳನ್ನು ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಹಿಷ್ಕಾರವನ್ನು ತಾತ್ಕಾಲಿಕವಾಗಿ ಮುಂದುಡಲಾಗುಗಿತ್ತು. ಆದರೆ ಭರವಸೆ ಕೇವಲ ಭರವಸೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರುಗಳಿಗೂ ಮನವಿಯನ್ನು ಸಲ್ಲಿಸಲಾಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಮತ್ತೆ ಒಕ್ಕೂಟ ಪದಾಧಿಕಾರಿಗಳ ಸಭೆ ೨೨-೦೭-೨೦೧೭ರಂದು ಬೆಳಗಾವಿಯಲ್ಲಿ ನಡೆಸಿ ಆಡಳಿತ ಮಂಡಳಿಗಳಿಂದ ಹಾಗೂ ಶಿಕ್ಷಕರಿಂದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ಯವಾಗಿದೆ ಅಲ್ಲದೇ ಸಭೆಯಲ್ಲಿ ಸೇರಿದ ಸಾವಿರಾರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಡಳಿತ ಮಂಡಳಿಗಳು ಸರ್ವಾನುಮತದಿಂದ ಅಗಸ್ಟ ೨೧ರಂದು ಶಾಲಾ ಕಾಲೇಜುಗಳನ್ನು ಅನಿರ್ದಿಷ್ಟಾವಧಿ ಬಂದ್ ಮಾಡಿ ಮುಷ್ಕರ ನಡೆಸಲು ಒಕ್ಕೊರಲ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟ ಭಟ್ಕಳ ತಾಲೂಕಾ ಘಟಕದ ಅಧ್ಯಕ್ಷ ಕೆ.ಬಿ.ಮಡಿವಾಳ ಮಾಧ್ಯಮದೊಂದಿಗೆ ಮಾತನಾಡಿದ್ದು ಹೀಗೆ,
ಬೈಟ್ : ಕೆ.ಬಿ.ಮಡಿವಾಳ.
ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟ ಭಟ್ಕಳ ತಾಲೂಕಾ ಘಟಕದ ಉಪಾಧ್ಯಕ್ಷ iಹ್ಮದ್ ಶಫೀ ಜತ್ತಿ ಮಾತನಾಡಿದ್ದು ಹೀಗೆ,
ಬೈಟ್ : iಹ್ಮದ್ ಶಫೀ ಜತ್ತಿ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟದ ಪರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಪರವಾನಿಗೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತದಲ್ಲಿ ಕಡಿತ, ಅನುದಾನಿತ ಶಾಲಾ ನೌಕರರಿಗೆ ಪಿಂಚಣಿ, ವಿವಿಧ ಕಾಲೇಜುಗಳಲ್ಲಿ ಕಂಡು ಬರುವ ಹಲವು ಸಮಸ್ಯೆಗಳು ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಂಡು ಬರುವ ತಾರತಮ್ಯವನ್ನು ಹೋಗಲಾಡಿಸುವಂತೆ ಭಟ್ಕಳ ತಹಸೀಲ್ದಾರ್ ವಿ.ಎನ್.ಬಾಡಕರ್ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟ ಭಟ್ಕಳ ತಾಲೂಕಾ ಘಟಕದಿಂದ ಮನವಿಯನ್ನು ಸಲ್ಲಿಸಲಾಯಿತು.
ತಹಸೀಲ್ದಾರ್ ವಿ.ಎನ್.ಬಾಡಕರ್ ಅನುಪಸ್ಥಿತಿಯಲ್ಲಿ ಕಛೇರಿಯ ಶಿರಸೇದ್ದಾರ್ ಸಂತೋಷ ಭಂಡಾರಿ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಎಸ್.ಬಿ.ಉಳ್ಲಿಕಾಶಿ, ಮಹೇಶ ರೆಡ್ಡಿ, ಅಬ್ದುಲ್ ನಾಸೀರ್, ಆಶಾ ಕಲ್ಮನೆ, ಸುಕನ್ಯಾ ಭಟ್, ಅಬ್ದುಲ್ ರಶೀಧ್ ಹುಣಸಿಮರದ್ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply