Header Ads
Breaking News

ಖಾಸಗಿ ಸಿಟಿ ಬಸ್ ಢಿಕ್ಕಿ,ಪಾದಚಾರಿ ಲಾರಿ ಚಾಲಕ ಸಾವು

ಉಳ್ಳಾಲ: ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಇಂದು ಬೆಳಿಗ್ಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೆಳಗಾವಿ ಓಬಳಾಪುರ ಮೂಲದ ಕಿರಣ್ ರಾಥೋಡ್ (22) ಮೃತರು. ಬೆಳಗಾವಿಯಿಂದ ಸ್ಟೀಲ್ ಲೋಡ್ ಅನ್ನು ಕಾಸರಗೋಡಿಗೆ ತಂದಿದ್ದ ರಾಥೋಡ್, ಮತ್ತೆ ವಾಪಸ್ಸಾಗುವಾಗ ಘಟನೆ ನಡೆದಿದೆ. ತಲಪಾಡಿ ಟೋಲ್ ಗೇಟ್ ಎದುರುಗಡೆ ಲಾರಿ ನಿಲ್ಲಿಸಿ ಚಹಾ ಕುಡಿಯಲೆಂದು ರಸ್ತೆ ಬದಿಯಲ್ಲಿದ್ದ ಸಂದರ್ಭ ಖಾಸಗಿ ಸಿಟಿ ಬಸ್ಸ್ ಢಿಕ್ಕಿ ಹೊಡೆದಿದೆ. ತಲಪಾಡಿಯಿಂದ ಮಂಗಳೂರಿಗೆ ತೆರಳಲು ಪ್ರಯಾಣಿಕರನ್ನು ಹತ್ತಿಸುವ ಭರಾಟೆಯಲ್ಲಿ ಒಮ್ಮಿಂದೊಮ್ಮೆಲೇ ಚಾಲಕ ಬಸ್ಸನ್ನು ತಿರುಗಿಸಿದ ಪರಿಣಾಮವಾಗಿ ರಸ್ತೆ ಬದಿಯಲ್ಲಿದ್ದ ಲಾರಿ ಚಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *