Header Ads
Header Ads
Breaking News

ಖೇಲೋ ಇಂಡಿಯಾ ಯೂತ್ ಗೇಮ್ಸ್ ಬಾಸ್ಕೆಟ್ ಬಾಲ್ ಚಾಂಪಿಯನ್‌ಶಿಪ್:  ಪ್ರದೀಪ್ ದಿಲೀಪ್ ಆಯ್ಕೆ

ಖೇಲೋ ಇಂಡಿಯಾ ಯೂತ್ ಗೇಮ್ಸ್ ಬಾಸ್ಕೆಟ್ ಬಾಲ್ ಚಾಂಪಿಯನ್‌ಶಿಪ್‌ಗೆ ಮಂಗಳೂರಿನ ಬಾಸ್ಕೆಟ್ ಬಾಲ್ ಕ್ಲಬ್‌ನ ಸದಸ್ಯ ಪ್ರದೀಪ್ ದಿಲೀಪ್ ಆಯ್ಕೆಯಾಗಿದ್ದಾರೆ. ಭಾರತ ಸರಕಾರದ ಕ್ರೀಡಾ ಸಚಿವಾಲಯದ ವತಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿ ಜನವರಿ 8ರಿಂದ 19ರ ವರೆಗೆ ಬಾಸ್ಕೆಟ್ ಬಾಲ್ ಪಂದ್ಯಾಟ ನಡೆಯಲಿದೆ.

ಬಾಸ್ಕೆಟ್‌ಬಾಲ್ ಕ್ರೀಡಾಪಟು ಪ್ರದೀಪ್ ದಿಲೀಪ್ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. ಅಲ್ಲದೆ ಮಂಗಳೂರು ಬಾಸ್ಕೆಟ್‌ಬಾಲ್ ಕ್ಲಬ್‌ನ ಸದಸ್ಯರು ಹೌದು, ಬಾಲಕರ ರಾಜ್ಯ ಯೂತ್ ಬಾಸ್ಕೆಟ್ ಬಾಲ್ ತಂಡವನ್ನು ಪ್ರದೀಪ್ ದಿಲೀಪ್ ಪ್ರತಿನಿಧಿಸಲಿದ್ದಾರೆ. ಮಂಗಳೂರು ಬಾಸ್ಕೆಟ್ ಬಾಲ್ ಕ್ಲಬ್‌ನ ಕೋಚ್ ಆದಿತ್ಯ ಮಹಾಲೇ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

Related posts

Leave a Reply