Header Ads
Header Ads
Breaking News

ಖ್ಯಾತ ಜವುಳಿ ಉದ್ಯಮಿ ಸಂಜೀವ ಶೆಟ್ಟಿ ಹೃದಯಾಘಾತದಿಂದ ನಿಧನ

ಪುತ್ತೂರು; ಪುತ್ತೂರಿನ ಪ್ರಖ್ಯಾತ ಜವುಳಿ ಉದ್ಯಮಿ ಎಂ.ಸಂಜೀವ ಶೆಟ್ಟಿ (94)ಹೃದಯಾಘಾತದಿಂದ ಮಂಗಳವಾರ ಮುಂಜಾನೆ 4.30ಕ್ಕೆ ನಿಧನರಾಗಿದ್ದಾರೆ.ಪುತ್ತೂರಿನಲ್ಲಿ ಕಳೆದ 70 ವರ್ಷಗಳ ಹಿಂದೆ ಸಣ್ಣಮಟ್ಟಿನ ಜವುಳಿ ಅಂಗಡಿಯನ್ನು ಪ್ರಾರಂಭಿಸಿ ಜವುಳಿ ಉದ್ಯಮಕ್ಕೆ ಕಾಲಿರಿಸಿದ ಅವರು ಬಳಿಕ ಪುತ್ತೂರು ಮತ್ತು ಮಂಗಳೂರಿನಲ್ಲಿ ಬೃಹತ್ ಮಟ್ಟದ ಜವುಳಿ ಮಳಿಗೆಯನ್ನು ಸ್ಥಾಪಿಸಿದ್ದರು. ಜವುಳಿ ಅಂಗಡಿಯನ್ನು ಆಕರ್ಷನೆಯ ಕೇಂದ್ರವನ್ನಾಗಿಸುವ ಬೊಂಬೆಗಳನ್ನು ಪುತ್ತೂರಲ್ಲಿ ಮೊದಲ ಬಾರಿಗೆ ಬಳಸಿಕೊಂಡ ಇವರು ಜವುಳಿ ಉದ್ಯಮಕ್ಕೆ ಪುತ್ತೂರಿನಲ್ಲಿ ಹೊಸ ಹಾದಿಯನ್ನು ನೀಡಿದ್ದರು. ಕೇಂದ್ರ ಸರ್ಕಾರದ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿಯರಾದ ಮಲ್ಲಿಕಾ ಪ್ರಸಾದ್, ಶಕುಂತಳಾ ಶೆಟ್ಟಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Related posts

Leave a Reply