Header Ads
Header Ads
Breaking News

ಗಂಗೊಳ್ಳಿಯಲ್ಲಿ ಬೈಕ್‌ಗೆ ಬೆಂಕಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಮೊಕ್ಕಾಂ

ಗಂಗೊಳ್ಳಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಗಂಗೊಳ್ಳಿ ಮೀನುಮಾರುಕಟ್ಟೆ ರಸ್ತೆಯ ಬದರುದ್ದಿನ್ ಎನ್ನುವವರ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. ಬೈಕ್ ಭಾಗಶಃ ಹಾನಿಯಾಗಿದೆ.

ಬದ್ರುದ್ದಿನ್ ಗಂಗೊಳ್ಳೀಯಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದು. ಹಿಂದಿನ ದಿನ ರಾತ್ರಿ ತಾವಿದ್ದ ಬಾಡಿಗೆ ಮನೆಯ ಮುಂದೆ ಇರಿಸಿದ್ದರು. ಬೆಳಗ್ಗಿನ ಜಾವ ಮನೆ ಮಾಲೀಕ ಗೋಪಾಲ್ ಶೆರಿಗಾರ್‌ಗೆ ಸುಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಹೊರಗೆ ಬಂದು ಪರೀಶಿಲಿಸಿದಾಗ ಬೈಕ್‌ಗೆ ಬೆಂಕಿ ಹಿಡಿದಿತ್ತು. ತಕ್ಷಣ ನೀರು ಹಾಕಿ ಬೆಂಕಿ ನಂದಿಸಿದ ಕಾರಣ ಬೈಕ್ ಸುಟ್ಟುಹೋಗುವುದು ತಡೆದಂತಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಳಿಗ್ಗೆ 100 ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಸೇರಿದ್ದು, ಒಂದು ರೀತಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಸ್ಥಳಕ್ಕೆ ಡಿವೈ‌ಎಸ್‌ಪಿ ಪ್ರವೀಣ ನಾಯಕ್, ಸರ್ಕಲ್ ಇನ್ಸಪೆಕ್ಟರ್ ಪರಮೇಶ ಆಗಮಿಸಿದ್ದು, ಅಹಿತಕರ ಘಟನೆ ಸಂಭವಿಸದಂತೆ ಹೆಚ್ಚುವರಿ ಪೊಲೀಸ್‌ರನ್ನು ನಿಯೋಜಿಸಲಾಗಿದೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts