Header Ads
Header Ads
Header Ads
Breaking News

ಗಂಟಲಲ್ಲಿ ಚಕ್ಕುಲಿ ಸಿಲುಕಿ ಮಗು ಸಾವು ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ನಡೆದ ಘಟನೆ

 

ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಹಾಕಿಕೊಂಡು ಒಂದು ವರ್ಷದ ಮಗು ಸಾವನ್ನಪ್ಪಿರೋ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ,ಗೇರುಕಟ್ಟೆ ನಿವಾಸಿ ವಿಠಲ ಎಂಬುವವರ ಪುತ್ರ ಆರುಷ್ ಮೃತ ಮಗು..ಆದಿತ್ಯವಾರವಷ್ಟೇ ಒಂದು ವರ್ಷದ ಹುಟ್ಟು ಹಬ್ಬವನ್ನು ಆರುಷ್ ಆಚರಿಸಿಕೊಂಡಿದ್ದು ನೂರಾರು ಮಂದಿ ಬಂಧುಗಳು ಬಂದು ಮಗುವಿಗೆ ಹುಟ್ಟು ಹಬ್ಬದ ಶುಭ ಕೋರಿದ್ದರು.ನಿನ್ನೆ ಬೆಳಗ್ಗೆ ಮಗುವಿಗೆ ತಿನ್ನಲೆಂದು ಹೆತ್ತವರು ಸಣ್ಣ ಚಕ್ಕುಲಿಯ ತುಂಡೊಂದನ್ನು ನೀಡಿದ್ದು ಮಗುವಿನ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ.ಮಗು ಜೋರಾಗಿ ಅಳುತ್ತಿದ್ದಂತೆಯೇ ಹೆತ್ತವರು ಸ್ಥಳೀಯ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲಿಯೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ..ವಿಧಿಯ ಕ್ರೂರ ಲೀಲೆ ಒಂದು ವರ್ಷದ ಮಗುವಿನ ಬಾಳು ಕಿತ್ತುಕೊಂಡಿರೋದಂತೂ ದುರಂತ..

Related posts

Leave a Reply