Header Ads
Breaking News

ಗಂಟಲಿನ ಕ್ಯಾನ್ಸರ್‍ಗೆ ತುತ್ತಾದ ಮುರ ನಿವಾಸಿ ನಾರಾಯಣ ಭಂಡಾರಿ ಅವರಿಗೆ ಬೇಕಿದೆ ನೆರವಿನ ಹಸ್ತ

ಗಂಟಲಿನ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯೋರ್ವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ನೆರವಿನ ಹಸ್ತ ಬೇಕಾಗಿದೆ. ಕಬಕ ಗ್ರಾಮದ ಮುರ ನಿವಾಸಿ ನಾರಾಯಣ ಭಂಡಾರಿ ಎಂಬವರ ಪುತ್ರರಾದ ಚಂದ್ರಶೇಖರ್ ಭಂಡಾರಿಯವರು ಸುಮಾರು 5 ತಿಂಗಳಿನಿಂದ ಗಂಟಲು ನೋವಿನಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಗಂಟಲಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರೇಡಿಯೋ ಥೆರಫಿಗೆ ಒಳಗಾಗಿದ್ದು ನಿರಂತರ ಔಷಧಿ ಪಡೆಯುತ್ತಿದ್ದಾರೆ.

ವೃತ್ತಿಯಲ್ಲಿ ನೌಕರರಾಗಿರುವ ಇವರು ಮುರದಲ್ಲಿ ಸೆಲೂನ್ ಉದ್ಯಮ ನಡೆಸಿಕೊಂಡಿದ್ದು, ಪ್ರಸ್ತುತ ಅನಾರೋಗ್ಯ ಪೀಡಿತರಾಗಿದ್ದರಿಂದ ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ.ಮುರದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ 7 ಮತ್ತು 4 ವರ್ಷ ಪ್ರಾಯದ ಮಕ್ಕಳೊಂದಿಗೆ ವಾಸಿಸುತ್ತಿರುವ ಇವರು ದಾನಿಗಳ ನೆರವು ಯಾಚಿಸುತ್ತಿದ್ದಾರೆ.

ಚಿಕಿತ್ಸೆಗೆ ಸಹಾಯಹಸ್ತ ಮಾಡುವ ದಾನಿಗಳು:
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಕಬಕ ಬ್ರಾಂಚ್’

IFSC  CODE:KVGB0005403

ACCOUNT NO: 89040999422.

ಈ ಖಾತೆಗೆ ನೆರವು ನೀಡಿ ಸಹಕರಿಸುವಂತೆ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *