
ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಪ್ರವೇಶಿಸುವವರ ಕೈಯಲ್ಲಿ 72 ಗಂಟೆ ಮೀರದ ಆರ್ಟಿಪಿಸಿಆರ್ ವರದಿ ಇರುವುದು ಕಡ್ಡಾಯವಾಗಿದೆ. ಫೆ.22ರಿಂದ ಜಿಲ್ಲೆಯ ಗಡಿಭಾಗಗಳಲ್ಲಿ ರ್ಯಾಂಡಮ್ ತಪಾಸಣೆ ಆರಂಭಿಸಲಾಗುತ್ತದೆ. ವರದಿ ಇಲ್ಲದವರನ್ನು ವಾಪಾಸು ಕಳುಹಿಸಲಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು.ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು.ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಅರ್ಧಪಾಲು ಕೇರಳದ್ದಾಗಿರುವುದರಿಂದ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತದೆ. ತಲಪಾಡಿ ಸೇರಿದಂತೆ 13ಗಡಿಭಾಗದ ಸ್ಥಳಗಳಲ್ಲಿ ಆರೋಗ್ಯ ಇಲಾಖೆ, ಪೊಲೀಸರು ಹಾಗೂ ಸ್ಥಳೀಯಾಡಳಿತ ಸಂಸ್ಥೆ ನೆರವಿನಿಂದ ಚೆಕ್ಪೋಸ್ಟ್ ನಿರ್ಮಿಸಲಾಗುತ್ತದೆ. ತಲಪಾಡಿಯಲ್ಲಿ ದಿನಕ್ಕೆ ಸೋಂಕು ಲಕ್ಷಣಗಳಿರುವ ಆಯ್ದ ತಲಾ 200 ಮಂದಿಗೆ ಆರ್ಎಟಿ ಮತ್ತು ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.