Header Ads
Header Ads
Breaking News

ಗಡಿ ಅತಿಕ್ರಮಿಸಿ ಮೀನುಗಾರಿಕೆಗೆ:ನಾಲ್ಕು ದೋಣಿಗಳನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಬೆಸ್ತರು

ಮಂಜೇಶ್ವರ: ಗಡಿ ಅತಿಕ್ರಮಿಸಿ ಮಂಗಳೂರಿನಿಂದ ಮಂಜೇಶ್ವರ ಪ್ರದೇಶಕ್ಕೆ ಮೀನು ಹಿಡಿಯಲು ಅಗಮಿಸಿದ ನಾಲ್ಕು ದೋಣಿಗಳನ್ನು ಮಂಜೇಶ್ವರ ಬೆಸ್ತರು ಸೆರೆ ಹಿಡಿದು ಕರಾವಳಿ ತೀರ ಪ್ರದೇಶದ ಪೊಲೀಸರಿಗೊಪ್ಪಿಸಿದ್ದಾರೆ.ಸುಮಾರು ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೀನು ಹಿಡಿಯಬೇಕಾದ ಮಂಗಳೂರಿನ ಬೆಸ್ತರು ರಾತ್ರಿ ವೇಳೆಗಳಲ್ಲಿ ಅತಿಕ್ರಮಿಸಿ ಮಂಜೇಶ್ವರ ಭಾಗಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಬೆಸ್ತರು ಈ ನಾಲ್ಕು ದೋಣಿಗಳನ್ನು ಹಾಗೂ ಮೀನುಗಾರಿಕೆ ನಡೆಸುವವರನ್ನು ಹಾಗೂ ಮೀನುಗಾರಿಕೆ ನಡೆಸಿ ಲಭಿಸಿದ ಲಕ್ಷಾಂತರ ಮೌಲ್ಯದ ಮೀನುಗಳನ್ನು ಕರಾವಳಿ ತೀರ ಪ್ರದೇಶದ ಸಿ ಐ ಸುರೇಶ್ ಬಾಬುರವರಿಗೆ ಹಸ್ತಾಂತರಿಸಿದ್ದಾರೆ.

ಇದರಂತೆ ಕರಾವಳಿ ತೀರದ ಸಿ ಐ ಯವರು ಇದನ್ನು ಮಂಜೇಶ್ವರ ಪೊಲೀಸರಿಗೊಪ್ಪಿಸಿದ್ದಾರೆ.ಈ ರೀತಿಯಾಗಿ ಅತಿಕ್ರಮಿಸಿ ಮೀನುಗಾರಿಕೆ ನಡೆಸುವುದರಿಂದ ಸ್ಥಳೀಯ ಬೆಸ್ತರಿಗೆ ಮೀನು ಲಭಿಸುವುದಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲು ಹಲವಾರು ಸಲ ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂಬುದಾಗಿ ಮಂಜೇಶ್ವರದ ಬೆಸ್ತರು ಹೇಳುತಿದ್ದಾರೆ

Related posts

Leave a Reply