Header Ads
Breaking News

ಗಡಿ ತಪ್ಪಿಸಿ ಓಡಾಡುವವರ ಸಂಖ್ಯೆ ಹೆಚ್ಚಳ : ಹೆಜಮಾಡಿ ಜನತೆಯಲ್ಲಿ ಹೆಚ್ಚಿದ ಆತಂಕ

ಮಂಗಳೂರು-ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯ ಗಡಿ ಕಾವಲನ್ನು ತಪ್ಪಿಸಿಕೊಂಡು ಪಕ್ಕದ ಖಾಸಗಿ ರಸ್ತೆಯಲ್ಲಿ ಅಡ್ಡಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದಂತ್ತೆ ಜನರಲ್ಲಿ ಆತಂಕ ಹೆಚ್ಚಿದೆ.
ಕೊರೊನಾ ಹಿನ್ನಲೆಯಲ್ಲಿ ಗಡಿಯಲ್ಲಿ ತಪಾಸಣೆ ಆರಂಭಗೊಳ್ಳುತ್ತಿದಂತ್ತೆ ಅಡ್ಡ ದಾರಿ ಹಿಡಿದ ಕೆಲ ಮಂದಿ ಪಾಸ್ ಇಲ್ಲದೆ ಮಂಗಳೂರು ಉಡುಪಿ ತಿರುಗಾಟ ನಡೆಸುವುದಕ್ಕೆ ಗುಡ್ಡೆ ಅಂಗಡಿಯ ಒಳ ರಸ್ತೆಯನ್ನು ರಾತ್ರಿ ಹಗಲೆನ್ನದೆ ಉಪಯೋಗಿಸಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದು ನಡೆಯುತ್ತಿದ್ದು, ಈ ಅಕ್ರಮ ಪ್ರವೇಶದ ಬಿಸಿಯನ್ನು ಅರಿತ ಸ್ಥಳೀಯರು ಆ ರಸ್ತೆಗೆ ತಡೆಗಳನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಆದರೂ ಬಿಡದ ಅಕ್ರಮಿಗಳು ವಾಹನಗಳನ್ನು ತಡೆ ಬೇಲಿ ಹಾಕಿದ ತೋಟಗಳಲ್ಲಿ ಪಾರ್ಕ್ ಮಾಡಿ, ಆ ಭಾಗದಿಂದ ಮತ್ತೊಂದು ವಾಹನಗಳನ್ನು ತರಿಸಿ ಅದರಲ್ಲಿ ಅಕ್ರಮ ಪ್ರಯಾಣ ಮುಂದುವರಿಸುತ್ತಿದ್ದಾರೆ ಎಂಬುದಾಗಿ ಸ್ಥಳೀಯ ರು ಆತಂಕ ವ್ಯಕ್ತ ಪಡಿಸುತ್ತಾರೆ.ಅದಲ್ಲದೆ ತಡಾರಾತ್ರಿ ಹೊತ್ತು ಈ ರಸ್ತೆಯಾಗಿ ಅಕ್ರಮ ಸಾಗಾಟಗಳು ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ಯ ಪಡಿಸಿದ ಸ್ಥಳೀಯರು ನಾಯಿಗಳು ಬೊಗಳಿದಾಗ ನಮಗೆ ಈ ಅಪರಾತ್ರಿಯ ಸಂಚಾರ ಗಮನಕ್ಕೆ ಬರುತ್ತಿದೆ ಎನ್ನುತ್ತಾರೆ.ಈ ಬಗ್ಗೆ ಪೊಲೀಸ್  ರು ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಆತಂಕದ ಕ್ಷಣಗಳನ್ನು ಎದುರಿಸುವ ದಿನ ಹತ್ತಿರ ಇಲ್ಲ ಎಂಬುದು ಸ್ಥಳೀಯರ ನೋವಿನ ಮಾತು.

Related posts

Leave a Reply

Your email address will not be published. Required fields are marked *