Header Ads
Header Ads
Breaking News

ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿರುವ ಜೂಜಾಟ: ಕಾರ್ಯಾಚರಣೆಗಿಳಿದ ಪೊಲೀಸರು

ಮಂಜೇಶ್ವರ : ಕೇರಳ ಕರ್ನಾಟದ ಗಡಿ ಪ್ರದೇಶಗಳಲ್ಲಿ ಪೊಲೀಸರ ಭಯವಿಲ್ಲದೆ ಜೂಜಾಟ ಬಿಂದಾಸ್ ಆಗಿ ನಡೆಯುತ್ತಿರುವ ಬಗ್ಗೆಪೊಲೀಸರುರಿ ಮಾಹಿತಿ ಲಭ್ಯವಾಗಿದೆ. ಪ್ರತಿ ದಿನ ಲಕ್ಷಾಂತರ ರೂಪಾಯಿಗಳ ಜೂಜಾಟ ನಡೆಯುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಗೂಡಂಗಡಿ, ಕಟ್ಟಡಗಳ ಹಿಂಬಾಗ ಸೇರಿದಂತೆ ಕೆಲವೊಂದು ಗೌಪ್ಯ ಸ್ಥಳಗಳನ್ನು ಗುರುತಿಸಿ ಜೂಜಾಟಕ್ಕೆ ಚಾಲನೆ ನೀಡಲಾಗುತ್ತಿದೆ.

ಈ ದಂಧೆಗೆ ಎಲ್ಲಾ ವರ್ಗದವರು ಆಗಮಿಸುತ್ತಾರೆ ಎಂಬುದಾಗಿ ಪೊಲೀಸರು ಹೇಳುತ್ತಿದ್ದಾರೆ. ಎರಡು ದಿನಗಳ ಹಿಂದೆ ತಲಪಾಡಿಯನ್ನು ಕೇಂದ್ರೀಕರಿಸಿ ಭಾರೀ ಜೂಜಾಟ ನಡೆಯುತ್ತಿರುವುದಾಗಿ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರುಅಲ್ಲಿಗೆ ದಾಳಿ ನಡೆಸಿ ಸುಮಾರು 30 ಮಂದಿಯನ್ನು ಸೆರೆ ಹಿಡಿದು 31,540 ರೂ. ವನ್ನು ವಶಪಡಿಸಿಕೊಂಡಿದ್ದಾರೆ.

Related posts

Leave a Reply