Header Ads
Header Ads
Breaking News

ಗಡಿ ಪ್ರದೇಶದ ಮೊದಲ ರೈಲ್ವೇ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

ಮಂಜೇಶ್ವರ: ಕರ್ನಾಟಕ ಕೇರಳ ಗಡಿ ಪ್ರದೇಶವಾದ ಕೇರಳದಿಂದ ಪ್ರಾರಂಭಗೊಳ್ಳುವ ಮೊದಲ ರೈಲ್ವೇ ನಿಲ್ದಾಣವಾದ ಮಂಜೇಶ್ವರ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಸಮಸ್ಯೆಗಳ ಸರಮಾಲೆಯೇ ಇದೆ.ರೈಲ್ವೇ ಇಲಾಖೆಗೆ ಹೆಚ್ಚಿನ ಆದಾಯವನ್ನು ಒದಗಿಸುತ್ತಿರುವ ಈ ನಿಲ್ದಾಣ ಪಾಲಕ್ಕಾಡ್ ರೈಲ್ವೇ ವಿಭಾಗೀಯದ ಅಧೀನತೆಯ ವ್ಯಾಪ್ತಿಯಲ್ಲಿದೆ. ಆದರೆ ಪಾಲಕ್ಕಾಡ್ ವಿಭಾಗೀಯ ಅಧಿಕಾರಿಗಳು ಇದನ್ನು ಅಂದಿನಿಂದಲೂ ಇಂದಿನ ತನಕ ಕಡೆಗಣಿಸುತ್ತ ಬಂದಿರುವುದಾಗಿ ಊರವರು ಆರೋಪಿಸುತಿದ್ದಾರೆ.ಈ ನಿಲ್ದಾಣದಲ್ಲಿ ನೂರಾರು ಸಮಸ್ಯೆಗಳು ಜೀವಂತವಾಗಿವೆ. ಇಲ್ಲಿ ಟಿಕೆಟ್ ಕೌಂಟರಿನಲ್ಲಿ ಟಿಕೆಟ್ ನೀಡುವ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಈ ನಿಟ್ಟಿನಲ್ಲಿ ಸ್ಟೇಶನ್ ಮಾಸ್ಟರೇ ಈ ಕೆಲಸವನ್ನು ಕೂಡಾ ನಿಭಾಯಿಸಬೇಕಾಗಿದೆ.ಬೆಳಿಗ್ಗೆ 7.15 ರಿಂದ 8ಗಂಟೆಯ ಮಧ್ಯೆ ಸುಮಾರು ಒಂದು ಸಾವಿರಕ್ಕಿಂತಲೂ ಮಿಕ್ಕ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸುತಿದ್ದಾರೆ. ಕೇವಲ ಎರಡು ಸಿಬ್ಬಂದಿಗಳು ಮಾತ್ರ ಇಲ್ಲಿ ಇದ್ದು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡದೇ ಇರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.ರೈಲ್ವೇ ಸಿಗ್ನಲ್, ಸುರಕ್ಷತೆ ಸೇರಿದಂತೆ ಇತರ ಜವಾಬ್ದಾರಿಯುತ ಕೆಲಸಗಳ ಬಗ್ಗೆ ಗಮನ ನೀಡಬೇಕಾದ ಸ್ಟೇಶನ್ ಮಾಸ್ಟರ್ ಗೆ ಟಿಕೆಟ್ ಕೌಂಟರಿನ ಜವಾಭ್ದಾರಿ ಕೂಡಾ ನೀಡಲಾಗಿರುವುದು ಮುಂದಿನ ದಿನಗಳಲ್ಲಿ ಒಂದು ದುರಂತಕ್ಕೂ ಕಾರಣವಾಗುವುದರಲ್ಲಿ ಎರಡು ಮಾತಿರಲಾರದು..ಪ್ರಯಾಣಿಕರೊಂದಿಗೆ ಹಣದಲ್ಲಿ ವ್ಯವಹರಿಸುವಾಗ ಪ್ರದಿನ ೬೦೦ ರೂ. ಜೀಬಿನಿಂದ ನಷ್ಟವಾಗುತ್ತಿರುವುದಾಗಿ ಸ್ಟೇಶನ್ ಮಾಸ್ಟರ್ ರಾಶಿಕ್ ಹೇಳುತಿದ್ದಾರೆ.ರೈಲ್ವೇ ನಿಲ್ದಾಣದ ನಿಯಂತ್ರಣ ವಿಭಾಗದ ಕಟ್ಟಡ ಸಂಪೂರ್ಣವಾಗಿ ಹದೆಗೆಟ್ಟಿದ್ದು, ಮೇಲ್ಬಾಗದ ಕಾಂಕ್ರೀಟ್ ತುಂಡು ತುಂಡಾಗಿ ಕೆಳಗೆ ಬೀಳುತ್ತಿದೆ.ಇದರಿಂದ ಕೂಡಾ ಅಪಾಯ ತಪ್ಪಿದ್ದಲ್ಲ. ಇಷ್ಟೊಂದು ಆದಾಯ ಬರುತ್ತಿರುವ ಈ ನಿಲ್ದಾಣದಲ್ಲಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಿಯೇ ಇಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಿನ ಟ್ಯಾಂಕ್ ನೆಪ ಮಾತ್ರಕ್ಕೆ ಇವೆ.ಅದೇ ರೀತಿ ಶೌಚಾಲಯದ ಸೌಕರ್ಯ ಇಲ್ಲಿ ಶೂನ್ಯವಾಗಿದೆ. ರಾತ್ರಿ ಸಮಯಗಳಲ್ಲಿ ನಿಲ್ದಾಣದಲ್ಲಿ ಅದೇ ರೀತಿ ತಾಗಿಕೊಂಡಿರುವ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲವಾಗಿವೆ. ಸಂಜೆಯಾಗುತಿದ್ದಂತೆ ಇಲ್ಲಿ ನಡೆದಾಡಲು ಕಳ್ಳರ ಭಯ ಸಮರ್ಪಕ ವಿದ್ಯುತ್ ದೀಪಗಳಿಲ್ಲದೆ ಕಳ್ಳರಿಗೆ ಲೂಟಿ ಮಾರ್ಗ ಸುಗಮವೆನಿಸಿದೆ. ನಿಲ್ದಾಣದ ಹಿಂಬಾಗದಲ್ಲಿ ಪೊದರುಗಳು ತುಂಬಿ ಕೊಂಡಿದ್ದು ಇದು ಕುಡುಕರ ಅದೇ ರೀತಿ ಗಾಂಜಾ ಮಾರಾಟಗಾರರ ಅಡ್ದೆಯಾಗಿ ಮಾರ್ಪಾಟಾಗಿದೆ. ರೈಲ್ವೇಗಳ ವೇಳಾ ಪಟ್ಟಿ ಅಥವಾ ಇನ್ಯಾವುದಾದರೂ ಮಾಹಿತಿ ಪಡೆಯಲು ದೂರವಾಣಿ ಇದೆಯಾದರೂ ಆದರೆ ಸಂಬಂಧಪಟ್ಟವರು ಸೌಜನ್ಯಕ್ಕಾದರೂ ಕರೆ ಸ್ವೀಕರಿಸಿ ಮಾಹಿತಿ ನೀಡುವುದಿಲ್ಲವೆಂಬುದಾಗಿ ಊರವರು ಆರೋಪಿಸುತಿದ್ದಾರೆ. ಕೂಡಲೇ ರೈಲ್ವೇ ಇಲಾಖೆಯ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Related posts

Leave a Reply