Header Ads
Header Ads
Breaking News

ಗಣಪತಿ ಮೂರ್ತಿ ತಯಾರಕರಿಗೆ ಕಹಿ ಸುದ್ದಿ ಪ್ಲಾಸ್ಟರ್ ಆಪ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸದಂತೆ ನೊಟೀಸ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿನ ಗಣಪತಿ ಮೂರ್ತಿ ತಯಾರಕರಿಗೆ ತಾಲೂಕ ಕಾರ್ಯನಿರ್ವಾಹಕ ದಂಢಾಧಿಕಾರಿಗಳ ಕಾರ್ಯಲಯದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸದಂತೆ ಕಟ್ಟುನಿಟ್ಟಿನ ನೋಟೀಸ್ ಜಾರಿ ಮಾಡಲಾಗಿದೆ.

ಈ ಬಾರಿಯ ಹಬ್ಬಕ್ಕೆ ಒಂದು ಬಿಕ್ಕಟ್ಟು ಎದುರಾಗಿದ್ದು, ಅದುವೇ ರಾಸಾಯನಿಕ ಬಣ್ಣ ಲೇಪಿತ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಯನ್ನು ನಿಷೇಧಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿಯೂ ಸಹ ಗಣೇಶ ಮೂರ್ತಿ ತಯಾರಕರಿಗೆ ತಾಲೂಕ ಕಾರ್ಯನಿರ್ವಾಹಕ ದಂಢಾಧಿಕಾರಿಗಳ ಕಾರ್ಯಲಯದಿಂದ ಮುರ್ಡೇಶ್ವರದ ಗಣೇಶ ಮೂರ್ತಿ ಕಲಾಕಾರರಾದ ಶ್ರೀಪಾದ ನಾರಾಯಣ ಕಂಚುಗಾರ, ಅರುಣ ಸದಾಶಿವ ಗುಡಿಗಾರ ಮತ್ತು ದೇವಿದಾಸ ಗುಡಿಗಾರ ಮಾವಳ್ಳಿ ಅವರಿಗೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸದಂತೆ ಹಾಗೂ ವಿತರಿಸದಂತೆ ನೋಟಿಸ್ ಜಾರಿ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ಹಬ್ಬ ಬಂತೆಂದರೆ ವಿಶೇಷವಾಗಿ ಪೇಟೆ ಪಟ್ಟಣಗಳ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಗುಡಿಗಾರರು ಮತ್ತು ಮಣ್ಣಿನ ಮೂರ್ತಿಗಳ ತಯಾರಕರ ಅಂಗಡಿಗಳ ಒಳಹೊರಗೆ ಚಿಕ್ಕ, ದೊಡ್ಡ ಗಾತ್ರದ ಗಣೇಶ ಮೂರ್ತಿಗಳು ಬಣ್ಣದಿಂದ ಅಲಂಕೃತವಾಗಿ ಗಮನ ಸೆಳೆಯುತ್ತಿದ್ದವು. ಅದೆಷ್ಟೊ ಗಣೇಶ ಮೂರ್ತಿ ತಯಾರಕರು ಮೂರ್ತಿ ತಯಾರಿಕೆಯನ್ನು ಪರಂಪರೆಯಿಂದ ನಡೆಸಿಕೊಂಡು ಬರುತ್ತಿದ್ದು, ಪರ ವಿರೋಧಗಳ ಮಧ್ಯೆ ಅವರ ಸ್ಥಿತಿ ಅತಂತ್ರವಾಗಿದೆ.

ರಾಘವೆಂದ್ರ ಮಲ್ಯ. ಭಟ್ಕಳ.

Related posts

Leave a Reply