Header Ads
Header Ads
Header Ads
Breaking News

ಗಣಪತಿ ವಿಸರ್ಜನೆ ವೇಳೆ ನೀರಿಗಿಳಿದಿದ್ದ ಯುವಕ ಮೃತ್ಯು ಭಟ್ಕಳದ ಮುರ್ಡೇಶ್ವರದಲ್ಲಿ ನಡೆದ ಘಟನೆ

 

ಭಟ್ಕಳ ತಾಲೂಕಿನ ಮುರ್ಡೇಶ್ವರದ ಓಲಗ ಮಂಟಪದ 41 ನೇ ವರ್ಷದ ಸಾರ್ವಜನಿಕ ಗಣಪತಿ ಮೂರ್ತಿ ವಿಸರ್ಜನೆಗೂ ಮುನ್ನಾ ಯುವಕರು ನೀರಿಗಿಳಿದಿದ್ದ ಸಂದರ್ಭದಲ್ಲಿ ಓರ್ವ ಯುವಕ ಕಲ್ಯಾಣಿ ಕೆರೆಯಲ್ಲಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದ ಘಟನೆ ಗುರುವಾರದಂದು ಸಂಜೆ ನಡೆದಿದೆ.

ಮುರ್ಡೇಶ್ವರದ ಓಲಗ ಮಂಟಪದಲ್ಲಿ ಪ್ರತಿಷ್ಠಾಪಿಸಿದ 41 ನೇ ವರ್ಷದ ಸಾರ್ವಜನಿಕ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕೆರೆಗೆ ಇಳಿದಿದ್ದ ಯುವಕರಲ್ಲಿ ಓರ್ವ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಭಟ್ಕಳ ತಾಲೂಕಿನ ಬಸ್ತಿಯ ಮಾಲುಗದ್ದೆ ನಿವಾಸಿಯಾದ ಸುಬ್ರಾಯ ಗೋಯ್ದ ನಾಯ್ಕ (35) ಮೃತ ಯುವಕನಾಗಿದ್ದು, ಯುವಕ ಈಜು ಬಾರದೇ ಮುಳುಗಿ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಓಲಗ ಮಂಟಪದಿಂದ ಬಿದ್ರಳ್ಳಿವರೆಗೆ ಮೆರವಣಿಗೆ ನಡೆಯುತ್ತಿದ್ದು ಬಳಿಕ ಅದ್ದೂರಿ ಮೆರವಣಿಗೆ ಒಂದು ಹಂತಕ್ಕೆ ಸ್ಥಬ್ಧವಾಯಿತು. ಇದಾದ ಬಳಿಕ ಅಲ್ಲಿನ ಸ್ಥಳಿಯ ಮೀನುಗಾರರ ತಂಡವೊಂದು ಕೆರೆಗೆ ಇಳಿದು ಮುಳುಗಿದ್ದ ಮೃತ ಯುವಕನ ದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಈ ಓಲಗ ಮಂಟಪದ ಪಕ್ಕದ ಕಲ್ಯಾಣಿ ಕೆರೆಯಲ್ಲಿ ಈ ಹಿಂದೆ 5-6 ವರ್ಷಗಳ ಹಿಂದೆ ಇದೇ ರೀತಿ ಮುಳುಗಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿದ್ದು ಸ್ಮರಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಮುರ್ಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply