Header Ads
Header Ads
Breaking News

ಗಣಿಗಾರಿಕೆಯ ಪ್ರಭಾವ :ಕಡಂದಲೆಯಲ್ಲಿ ಸ್ಪ್ರಿಂಗ್‌ನಂತೆ ಅಲುಗಾಡುತ್ತಿದೆ ಭೂಮಿ

ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಚಾರವಾಗಿರುವ ಕಡಂದಲೆ ಗ್ರಾಮದಲ್ಲಿ ಬೊಮ್ಮಲಗುಡ್ಡೆ ಎಂಬಲ್ಲಿ ನೆಲ ತೇಲಿದ ಅನುಭವ, ಭೂಮಿಯ ಮೇಲ್ಪದರ ವಾಟರ್ ಬೆಡ್‌ನಂತಾಗಿದೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾಗಿದೆ. ವಾಸ್ತವದಲ್ಲಿ ಇದು ಈ ಭಾಗದಲ್ಲಿ ಹಿಂದೆ ನಡೆದಿದ್ದ ಗಣಿಗಾರಿಕೆಯಿಂದಾದ ಕೃತಕ ಕಂಪನ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಅನುಭವಕ್ಕಾಗಿ ಸ್ಥಳಕ್ಕೆ ತೆರಳಿದ್ದ ಪತ್ರಕರ್ತರಿಗೆ ಸ್ಥಳೀಯರು ಪೂರಕ ಮಾಹಿತಿ ನೀಡಿದ್ದು ವಾಸ್ತವ ವಿಚಾರ ಬಹಿರಂಗಗೊಂಡಂತಾಗಿದೆ.

ಕಡಂದಲೆ ಬೊಮ್ಮಲಗುಡ್ಡೆ ಎಂಬಲ್ಲಿ ನೆಲ ತೇಲಿದ ಅನುಭವದ ಬಗ್ಗೆ ದೃಶ್ಯಮಾಧ್ಯಮದಲ್ಲಿ ಬಿತ್ತರವಾದ ಸುದ್ದಿ ಭಾರತದಲ್ಲಿ ಇದೇ ಮೊದಲ ಪ್ರಕೃತಿ ವಿಸ್ಮಯ ಎಂದು ಸುದ್ದಿಯಾಗಿತ್ತು. ಆದರೆ ಈ ಬೆಳವಣಿಗೆ ಮಾನವ ನಿರ್ಮಿತ ವಿಸ್ಮಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮುಚ್ಚಿದ ಈ ಹೊಂಡದ ತಳಭಾಗದಲ್ಲಿ ನೀರಿನ ಒರತೆ ಹಾಗೆಯೇ ಇದ್ದು ನೆಲ ಮತ್ತು ಜಲ್ಲಿ ಹುಡಿಯ ಮಧ್ಯೆ ಅಂತರ ಕಾಯ್ದುಕೊಂಡಿದೆ. .ಮಳೆಗಾಲದಲ್ಲಿ ಮುಚ್ಚಿದ ಹೊಂಡದ ತಳಭಾಗದಲ್ಲಿ ನೀರು ಪ್ರವಾಹಿಸಿ ಹಾಕಿದ ಮಣ್ಣು ನೀರಿನಲ್ಲಿ ತೇಲುವ ಕಾರಣ ಆ ಜಾಗ ಮೃದುವಾಗಿದ್ದು ಸ್ಪ್ರಿಂಗ್ ರೀತಿಯಾಗಿದೆ.ಮಳೆಗಾಲದಲ್ಲಿ ಮಾತ್ರ ಈ ಅನುಭವ ವಿಶೇಷವಾಗಿ ಗಮನಕ್ಕೆ ಬರುತ್ತಿದೆ ಎನ್ನಲಾಗಿದೆ.

Related posts

Leave a Reply