Header Ads
Header Ads
Breaking News

ಗಣೇಶೋತ್ಸವ ನಮ್ಮ ಕಲೆ ಮತ್ತು ಸಂಸ್ಕೃತಿಯ ಪ್ರತೀಕ. ಡಿಸಿಪಿ ಉಮಾಪ್ರಶಾಂತ್ ಅಭಿಪ್ರಾಯ

ಮೂಡುಬಿದಿರೆ: ಗಣೇಶೋತ್ಸವ ನಮ್ಮ ಕಲೆ ಮತ್ತು ಸಂಸ್ಕೃತಿಯ ಪ್ರತೀಕ. ಸಾಮರಸ್ಯದ ಬದುಕಿಗೆ ಇಂತಹ ಹಬ್ಬಗಳು ಒಳ್ಳೆಯ ಸಂದೇಶವನ್ನು ನೀಡುತ್ತವೆ ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಉಮಾಪ್ರಶಾಂತ್ ಹೇಳಿದರು.ಸಮಾಜ ಮಂದಿರದಲ್ಲಿ ಸಾರ್ವಜನಿಕ ಗಣಶೋತ್ಸವ ವತಿಯಿಂದ ನಡೆದ ೫೫ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಗುರುಹಿರಿಯರನ್ನು ಗೌರವಿಸಬೇಕು. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು. ಈ ವಿಚಾರದಲ್ಲಿ ಯುವಕರು ಹೆಚ್ಚು ಮುಂದೆ ಬರಬೇಕು ಎಂದರು.

ಮಡಿಕೇರಿಯಲ್ಲಿ ನಡೆದ ಅತಿವೃಷ್ಟಿಯನ್ನು ಉಲ್ಲೇಖಿಸಿದ ಅವರು ಸಮಾಜದ ಜತೆಗೆ ಪ್ರಕೃತಿಯನ್ನು ನಾವು ಪ್ರೀತಿಸಬೇಕು ಎಂದು ಹೇಳಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸಾರ್ವಜನಿಕ ಮೂಡುಬಿದಿರೆ ಗಣೇಶೋತ್ಸವದಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸುತ್ತಿರುವುದು ಇಲ್ಲಿನ ವಿಶೇಷ ಎಂದರು. ಚೌಟರ ಅರಮನೆಯ ಕುಲದೀಪ್ ಎಂ, ಸಮಿತಿ ಉಪಾಧ್ಯಕ್ಷ ಕೆ. ಶ್ರೀಪತಿ ಭಟ್, ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply