Header Ads
Header Ads
Breaking News

ಗಬ್ಬೆದ್ದು ನಾರುತ್ತಿರುವ ಭಟ್ಕಳದ ಶಿರಾಲಿ ಮೀನು ಮಾರುಕಟ್ಟೆ

ದೇಶದಾಧ್ಯಂತ ಸ್ವಚ್ಚತಾ ಅಭಿಯಾನ ನಡೆಯುತ್ತಿದ್ದರೆ ಭಟ್ಕಳ ತಾಲೂಕ ಶಿರಾಲಿ ಮೀನು ಮಾರುಕಟ್ಟೆ ಹಾಗು ಅಕ್ಕ ಪಕ್ಕಗಳಲ್ಲಿ ಮಾತ್ರ ಯಾವುದೆ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸದೆ ಗಬ್ಬೆದ್ದು ನಾರುತ್ತಿದ್ದು ರೋಗ ರುಜಿನುಗಳ ಗುಡಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಸ್ಟೋರಿದೇಶದಾಧ್ಯಂತ ದೇಶದ ಪ್ರಧಾನಿ ನರೆಂದ್ರ ಮೋದಿ ಸ್ವಚ್ಚತೆಗೆ ಮಹತ್ವವನ್ನು ಕೊಟ್ಟು ಸ್ವಚ್ಚತಾ ಅಭಿಯಾನವನ್ನು ನಡೆಸುತ್ತಿದ್ದರೆ ಭಟ್ಕಳ ಅವಳಿ ನಗರ ಎಂಬ ಖ್ಯಾತಿಯನ್ನು ಪಡೆದಿರುವ ಶಿರಾಲಿಯಲ್ಲಿರುವ ಮೀನು ಮಾರುಕಟ್ಟೆ ಹಾಗು ಅದರ ಅಕ್ಕ ಪಕ್ಕಗಳಲ್ಲಿ ಕಸತ್ಯಾಜ್ಯಗಳು ತುಂಬಿದ್ದು ಗಬ್ಬೆದ್ದು ನಾರುತ್ತಿದ್ದು ಭಯಂಕರ ರೋಗಗಳಿಗೆ ಆಹ್ವಾನವನ್ನು ನೀಡುವಂತಿದೆ ಭಟ್ಕಳ ತಾಲೂಕ ಆಡಳಿತ ಸ್ವಚ್ಚ ಭಾರತ್ ,

ಸ್ವಚ್ಚ ಭಾರತ್ ಮಿಷನ್ ಎಂಬ ಮಂತ್ರಗಳನ್ನು ದಿನ ನಿತ್ಯ ಜಪಿಸುತ್ತಿದ್ದರೆ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ಮಾತ್ರ ತನಗೂ ಸ್ವಚ್ಚತೆಗೂ ಯಾವುದೇ ಸಂಬಂದವಿಲ್ಲವೇನೊ ಎಂಬ ಮನೋಬಾನೆಯಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ತಾಲೂಕಿನ ಶಿರಾಲಿ ಮೀನು ಮಾರುಕಟ್ಟೆ ಇಂದು ಹಾಳು ಕೊಂಪೆಯಾಗಿದ್ದು ಮೀನು ಮಾರುಕಟ್ಟೆಗೆ ತಮ್ಮ ಹೊಟ್ಟೆ ಪಾಡಿಗಾಗಿ ಅನೇಕ ಮಹಿಳೆಯರು ಮೀನು ಮಾರಾಟ ಮಾಡಲು ಬರುತ್ತಿದ್ದು ದಿನ ನಿತ್ಯ ಮಹಿಳೆಯರು ಕೊಂಪೆಯಂತಿರುವ ಈ ಮೀನು ಮಾರುಕಟ್ಟೆಯಲ್ಲೆ ಕುಳಿತು ಮೀನು ಮಾರಾಟ ಮಾಡುವ ಅನಿವಾರ್‍ಯತೆ ಎದುರಾಗಿದೆ ಇಲ್ಲಿ ಕುಳಿತು ಮೀನು ಮಾರಾಟ ಮಾಡುವುದರಿಂದ ಕಸಗಳಿಂದ ಹೆಚ್ಚಿರುವ ಸೊಳ್ಳೆಗಳಿಂದ ಈ ಮಹಿಳೆಯರಿಗೆ ಮಲೆರಿಯಾ, ಡೆಂಗ್ಯೂಗಳಂತ ಮಾರಕ ರೋಗಗಳು ಹರಡುವ ಸಂಬವವಿರುತ್ತದೆ.

ಅಲ್ಲದ ಈ ರೀತಿಯಲ್ಲಿ ತಾಜ್ಯ ಹಾಗು ಕೊಳಚೆಗಳು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವವರಿಗೆ ಹೇಗೆ ರೋಗಗಳು ಹರಡುವ ಸಂಬವವಿರುತ್ತದೆಯೋ ಹಾಗೆ ಇಲ್ಲಿ ಮೀನನನ್ನು ಕರಿದಿಸಲು ಬರುವವರಿಗೂ ರೋಗ ಹರಡುವ ಸಂಬವವಿರುತ್ತದೆ ತಿನ್ನುವ ವಸ್ತುಗಳನ್ನು ಕೋಳಚೆಯಲ್ಲಿ ಇಟ್ಟುಕೊಂಡು ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇಂತಹ ಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಶಿರಾಲಿಯ ಸಾರ್ವಜನಿಕರು ಅನೇಕ ಭಯಾನಕ ಕಾಯಿಲೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲಾ ಆದ್ದರಿಂದ ಇನ್ನು ಮುಂದಾದರು ಇದ್ದಕ್ಕೆ ಸಂಬಂದಿಸಿದಂತೆ ತಾಲೂಕಿನ ಶಾಸಕರಾದ ಸುನಿಲ್ ನಾಯ್ಕ ತಮ್ಮದೆ ಊರಿನ ಈ ಕಸದ ಸಮಸ್ಯೆಗೆ ಮುಕ್ತಿ ನಿಡುತ್ತಾರೋ ಅಥವಾ ಬಯಾನಕ ರೋಗಗಳು ಹರಡುವವರೆಗೆ ಕಾಯುತ್ತಾರೋ ಎಂದು ಕಾದು ನೋಡ ಬೇಕಾಗಿದೆ

Related posts

Leave a Reply