Header Ads
Breaking News

ಚರಂಡಿಯಲ್ಲಿ ತುಂಬಿದ ತ್ಯಾಜ್ಯಗಳು : ಗಬ್ಬೆದ್ದು ನಾರುತ್ತಿದೆ ಹೊಸಂಗಡಿ ಪರಿಸರ

 ಒಂದೆಡೆ ಗಬ್ಬೆದ್ದು ನಾರ್ತಾ ಇರೋ ಚರಂಡಿ ನೀರು. ಇನ್ನೊಂದೆ ಕಡೆ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಮತ್ತೊಂದು ಕಡೆ ಸೊಳ್ಳೆಗಳ ನರ್ತನ, ಅಷ್ಟಕ್ಕೂ ಈ ದೃಶ್ಯಗಳು ಕಂಡು ಬರ್ತಿರೋದು ಎಲ್ಲಿ ಅಂತೀರಾ ಹಾಗಾದ್ರೆ…ಈ ಸ್ಟೋರಿ ನೋಡಿ..

ಹೌದು.. ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಓಬಿರಾಯನ ಕಾಲದಲ್ಲಿ ಹೆಸರಿಗೊಂದು ಚರಂಡಿ ನಿರ್ಮಾಣವಾಗಿದೆ. ವಿವಿಧ ಭಾಗಗಳಿಂದ ಹರಿದು ಬರುತ್ತಿರುವ ನೀರು ಹೊಸಂಗಡಿ ಪೇಟೆಯಲ್ಲಿ ಕಟ್ಟಿ ನಿಲ್ಲುವುದು ಮಾತ್ರವಲ್ಲದೆ ದುರ್ಗಂಧ ಬೀರುವ ನೀರು ಪಾದಚಾರಿಗಳಿಗೆ ಭಾರೀ ತೊಂದರೆಯನ್ನುಂಟುಮಾಡಿದೆ. ಈ ಬಗ್ಗೆ ಮೌನವನ್ನು ಪಾಲಿಸುತ್ತಿರುವ ಅಧಿಕಾರಿಗಳಿಗೆ ಜನತೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಅಧಿಕಾರಕ್ಕೇರುತ್ತಿರುವ ಪಂಚಾಯತಿನ ಅಧಿಕಾರಿಗಳು ಈ ಬಗ್ಗೆ ಕಿಂಚತ್ತೂ ಚಿಂತಿಸದೆ ಇರುವ ಕಾರಣ ಇದೀಗ ಹೊಸಂಗಡಿ ಪೇಟೆ ಗುಬ್ಬೆದ್ದು ನಾರುತ್ತಿದೆ.

ಈ ಬಗ್ಗೆ ಪಂಚಾಯತ್ ಅಧಿಕೃತರಲ್ಲಿ ಹೇಳುವಾಗ ಅದು ನಮಗೆ ಸಂಬಂಧಪಟ್ಟದ್ದಲ್ಲ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ದೂರು ದಾಖಲಿಸುವಂತೆ ಹೇಳ್ತಾರೆ. ಆದ್ರೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಲ್ಲಿ ಹೇಳುವಾಗ ಅದು ಪಂಚಾಚಾಯತಿನ ಉಸ್ತುವಾರಿಯ ಕೆಲಸ ಎಂದು ಹೇಳಿ ಜಾರುತ್ತಿರುವುದಾಗಿ ಊರವರು ಆರೋಪಿಸುತ್ತಿದ್ದಾರೆ.

ಆನೆಕಲ್ಲು ಭಾಗಕ್ಕೆ ತೆರಳುವ ಮೇಲಿನ ರಸ್ತೆಯಲ್ಲಿ ಚರಂಡಿ ಸಂಪೂರ್ಣ ಮಣ್ಣು, ಕಸಕಡ್ಡಿಯಿಂದ ತುಂಬಿದ ಕಾರಣ ನೀರು ರಸ್ತೆಯಲ್ಲಿ ಹರಿದು ಜಲಾವೃತಗೊಂಡಿದೆ. ಇದರಿಂದಾಗಿ ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ, ಮಳೆಗಾಲದ ಪೂರ್ವಭಾವಿಯಾಗಿ ಚರಂಡಿಯಿಂದ ಕಸಕಡ್ಡಿ, ಮಣ್ಣು ತೆರವುಗೊಳಿಸದಿರುವುದು ಈ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ.

ಇದೀಗ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ, ಆನೆ ಕಲ್ಲು ರಸ್ತೆ, ರೈಲ್ವೆ ಗೇಟ್ ಸಮೀಪದ ಚರಂಡಿಗಳಲ್ಲಿ ತ್ಯಾಜ್ಯಗಳು ಹಾಗು ಮೇಲಿನ ಜಲ ತುಂಬಿಕೊಂಡಿವೆ. ಸರಿಯಾದ ರೀತಿಯಲ್ಲಿ ಮಳೆಗಾಲ ಆರಂಭಗೊಂಡರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ ಊರವರು. ಸಂಬಂಧಪಟ್ಟವರು ಆದಷ್ಟು ಬೇಗನೆ ಸಮಸ್ಯೆಗೆ ಪರಿಹಾರವನ್ನು ನೀಡುವಂತೆ ಊರವರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *