Header Ads
Header Ads
Breaking News

ಗಮನ ಸೆಳೆದ ಉಡುಪಿ ನಾಗರಿಕ ಸಮಿತಿಯ ವಿಶೇಷ ವಾಹನ ಪೂಜೆ

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಎರಡು ಉಚಿತ ಅಂಬುಲೇನ್ಸ್, ಹಾಗೂ ವಿದ್ಯೂತ್ ಚಾಲಿತ ಸಂಚಾರಿ ಶೀತಲಿಕೃತ ಶವಪಟ್ಟಿಗೆಯನ್ನು ಕಳೆದ ಐದು ವರ್ಷಗಳಿಂದ ನಾಗರಿಕ ಸೇವೆಗಾಗಿ ಉಚಿತವಾಗಿ ಒದಗಿಸುತ್ತಿದೆ. ಅವುಗಳ ಪೂಜೆಯು ನವರಾತ್ರಿಯ ಆಯುಧ ಪೂಜೆಯು ವಿಶೇಷ ರೀತಿಯಲ್ಲಿ ನಗರದ ಮಾರುಥಿ ವಿಥೀಕಾದಲ್ಲಿ ಇರುವ ಸಮಿತಿಯ ಕಛೇರಿಯ ವಠಾರದಲ್ಲಿ ನಡೆಯಿತು.ಪೂಜೆಯ ವಿಧಿ ವಿಧಾನಗಳನ್ನು ಕೊರಗ ಸಮಾಜದ ಅರ್ಚಕ ಸುಂದರ ಕೊರಗ ಮಂಚಿ ಅವರು ನಡೆಸಿದ್ದು ಸೇರಿದವರ ಗಮನ ಸೆಳೆಯಿತು. ನಂತರ ಗಣ್ಯರ ಉಪಸ್ಥಿತಿಯಲ್ಲಿ ಅರ್ಚಕರನ್ನು ಸನ್ಮಾನಿಸಲಾಯಿತು. ಉಡುಪಿಯ ಶ್ರೀ ವೀರ ವಿನಾಯಕ ನಾಸಿಕ್ ಕಲಾತಂಡದ ಬ್ಯಾಂಡ್ ಗಮನಸೆಳೆಯಿತು.ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ವಾಸುದೇವ್ ಚಿತ್ಪಾಡಿ, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಹಾಗೂ ವಿಶೇಷ ಆಹ್ವಾನಿತರಾಗಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷರಾದ ಸಿ.ಎಸ್.ರಾವ್. ದಿನಕರ ಪೂಂಜ, ಕೆ. ಬಾಲಗಂಗಾಧರ ರಾವ್, ಮುರುಳಿಧರ ಬಲ್ಲಾಳ್, ಸುರೇಶ್ ಕುಕ್ಕಿಕಟ್ಟೆ, ಸತೀಶ್ ಕಲ್ಮಾಡಿ, ರಾಘವೇಂದ್ರ ಪ್ರಭು ಕರ್ವಾಲು, ಉಡುಪಿ ಜನಾರ್ಧನ್, ಸುಧಾಕರ್ ದೇವಾಡಿಗ, ಭಾಸ್ಕರ ಪಾಲನ್ ಮತ್ತಿತರರು ಉಪಸ್ಥಿತರಿದ್ದರು.ಹಲವು ವರ್ಷಗಳಿಂದ ನಾನು ಕೊರಗ ಸಮಾಜದವರು ನೆಡೆಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅರ್ಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಇದುವರೆಗೂ ಇತರ ಸಮಾಜದ ಪೂಜೆ ಮಾಡಿದವನಲ್ಲ. ಯಾರೂ ಅವಕಾಶವನ್ನು ನನಗೆ ಕಲ್ಪಿಸಲಿಲ್ಲ. ಆದರೆ ಉಡುಪಿಯ ನಾಗರಿಕ ಸಮಿತಿ ನನಗೆ ಆಹ್ವಾನ ನೀಡಿ ವಾಹನ ಪೂಜೆ ನಡೆಸಲು ಅವಕಾಶ ನೀಡಿತು. ದೇವರ ಪೂಜೆಯಲ್ಲಿ ಜಾತಿಭೇದ ಮಾಡ ಬಾರದೆನ್ನುವ ಸಂದೇಶ ಅವರು ಸಮಾಜಕ್ಕೆ ರವಾನಿಸಿದರು. ನಾಗರಿಕ ಸಮಿತಿ ಕಳೆದ ಇಪ್ಪತ್ತು ವರ್ಷಗಳಿಂದ ಜಾತಿ ಬೇಧ ಮಾಡದೆ ಸೇವೆ ಸಲ್ಲಿಸುತ್ತ ಬಂದಿದೆ. ರಮ್ಜಾನ್, ಕ್ರಿಶ್ಮಸ್, ದೀಪಾವಳಿ ಮೂರು ಧರ್ಮದ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಿ ಕೊಂಡು ಬಂದಿದೆ. ಅದರಂತೆ ನಾವು ದೇವರಿಗೆ ಜಾತಿ ಭೇಧ ಇಲ್ಲ. ಎನ್ನುವ ನೆಲೆಯಲ್ಲಿ ಕೊರಗ ಸಮಾಜದ ಅರ್ಚಕರನ್ನು ಪೂಜಾ ಕಾರ್ಯಕ್ಕೆ ಆಹ್ವಾನಿಸಿದೆವು. ಸುಂದರ ಕೊರಗರು ಧಾರ್ಮಿಕ ವಿಧಿ ವಿಧಾನಗಳನ್ನು ಭಕ್ತಿಯಿಂದ ಅಚ್ಚುಕಟ್ಟಾಗಿ ಮಾಡಿ ಸೇರಿದವರೆಲ್ಲರನ್ನು ಪುಳಕಿತಗೊಳಿಸಿದರು.

Related posts

Leave a Reply