Header Ads
Header Ads
Breaking News

ಗಮನ ಸೆಳೆದ ನೇಗಿಲಯೋಗಿಯ ಕ್ಯಾಟ್ ವಾಕ್ || ನಗರದ ಕುದ್ಮುಲ್ ರಂಗರಾವ್ ಪುರಭವದಲ್ಲಿ ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಹಾಗೂ ಮಿಫ್ಟ್ ಕಾಲೇಜಿನ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವದಲ್ಲಿ ನೇಗಿಲ ಯೋಗಿಯ ಕಾಯಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು 20 ಜನ ರೈತರು ಕ್ಯಾಟ್ ವಾಕ್ ಮಾಡಿ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದು, ನಗರದಲ್ಲಿ ನೇಗಿಲ ಯೋಗಿಯ ಕ್ಯಾಟ್ ವಾಕ್ ಗಮನ ಸೆಳೆಯಿತು.

 ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವದಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಹಾಗೂ ಮಿಫ್ಟ್ ಕಾಲೇಜಿನ ಆಶ್ರಯದಲ್ಲಿ ನೇಗಿಲ ಯೋಗಿಯ ಕಾಯಕ ನಡಿಗೆ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ತುಳು ನಾಡಿನ ಸಂಸ್ಕೃತಿಕ ವಿಶಿಷ್ಟವಾಗಿದ್ದು, ಕೃಷಿಯೇ ಇಲ್ಲಿ ಪ್ರಧಾನವಾಗಿದೆ. ದೈವಾರಾಧನೆ , ನಾಗಾರಾಧನೆಯಂತಹ ಆಚರಣೆಗಳು ಕೃಷಿಗೆ ಸಂಬಂಧಿಸಿದ್ದಾಗಿವೆ. ಇಂತಹ ಸಂಸ್ಕೃತಿ ಸ್ಪರಿಸುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಬಳಿಕ ಮಿಫ್ಟ್ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಎಂ.ಜಿ.ಹೆಗಡೆ ಮಾತನಾಡಿ, ಅನಾಥ ಮಕ್ಕಳ ಫ್ಯಾಷನ್ ಫೋ, ಕಾಲೇಜು ವಿದ್ಯಾರ್ಥಿ ಸಂಘದ ನಿರಂತರವಾಗಿ 22 ವರ್ಷಗಳಿಂದ ಅನಾಥಾಶ್ರಮದಲ್ಲಿ ಉದ್ಘಾಟನೆ, ಪೌರಕಾರ್ಮಿಕರ ತುಲಾಭಾರ ಸೇರಿದಂತೆ ನಮ್ಮ ಕಾಲೇಜು ವಿಶೇಷವಾದ ಕಾರ್ಯಕ್ರಮಗಳು ಮೂಲಕ ಸಮಾಜದ ಹಲವು ವರ್ಗಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಮಿಫ್ಟ್ ಸಂಸ್ಥೆ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ, ವಕೀಲ ರಾಘವೇಂದ್ರರಾವ್, ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು.ಇನ್ನು ಕಾಲೇಜು ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟವಾಗಿ ಫ್ಯಾಶನ್ ಪ್ರದರ್ಶನವನ್ನು ಆಯೋಜಿಸಿದ್ದು. ರೈತರನ್ನ ರ್‍ಯಾಂಪ್ ಮೇಲೆ ನಡೆಸಿ ಕೃಷಿ ಮಹತ್ವದ ಪ್ರದರ್ಶನ ನೀಡಿದೆ.


ಆರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಾವೇ ಡಿಸೈನ್ ಮಾಡಿದ ಕಾಸ್ಟ್ಯೂಮ್ ಜೊತೆ ಕ್ಯಾಟ್ ವಾಕ್ ನಡೆಸಿ ಮೆಚ್ಚುಗೆಗೆ ಪಾತ್ರರಾದರೆ, ಬಳಿಕ ಆಯೋಜನೆಗೊಂಡ ರೈತರ ಕ್ಯಾಟ್ ವಾಕ್ ವಿದ್ಯಾರ್ಥಿಗಳ ನಡಿಗೆಗಿಂತಲೂ ಹೆಚ್ಚಿನ ಪ್ರಶಂಸೆಯನ್ನ ಗಳಿಸಿಕೊಂಡಿತು. ರೈತರು ಗದ್ದೆಯಲ್ಲಿ ಕೃಷಿ ಮಾಡುವ ಪದ್ದತಿ, ಕೃಷಿಗೆ ಬಳಸುವ ವಿವಿಧ ಪರಿಕರಗಳನ್ನು ವೇದಿಕೆಯ ಮೇಲೆ ತಮ್ಮ ನಡಿಗೆಯ ಮೂಲಕ ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

Related posts

Leave a Reply

Your email address will not be published. Required fields are marked *