Breaking News

ಗಲಭೆ ಹುಟ್ಟಿಸುವುದು ನಳಿನ್ ಕಟೀಲ್, ಶೋಭಾ ಸ್ವಭಾವ, ವಿಟ್ಲದಲ್ಲಿ ಜಿ. ಪಂ. ಸದಸ್ಯ ಎಂ. ಎi. ಮುಹಮ್ಮದ್

ಕಲ್ಲಡ್ಕದಲ್ಲಿ ಗಲಾಟೆ ಆರಂಭವಾಗಿರುವುದು ಯಾರಿಂದ? ಕೋಮು ಗಲಭೆ ಸೃಷ್ಟಿಸಿದ್ದು ಯಾರು ಎಂಬ ಸತ್ಯ ಎಲ್ಲರಿಗೂ ಗೊತ್ತು. ಸಚಿವ ರಮಾನಾಥ ರೈ ಅವರು ಒಂದು ವರ್ಗವನ್ನು ಓಲೈಸುವುದಕ್ಕಾಗಿ ರಾಜಕೀಯ ಮಾಡುತ್ತಾರೆ ಎಂಬ ಆರೋಪ ಬಿಜೆಪಿ ಅಥವಾ ವಿರೋಧ ಪಕ್ಷಗಳು ಮಾಡುತ್ತಿರುತ್ತವೆ. ಶೇ. ೯೫ರಷ್ಟು ಮುಸಲ್ಮಾನರು ಹಾಗೂ ಶೇ. ೯೫ರಷ್ಟು ಬಹುಸಂಖ್ಯಾಕರು ಸಚಿವ ರಮಾನಾಥ ರೈ ಪರವೇ ಇದ್ದಾರೆ ಎಂದು ಜಿ. ಪಂ. ಸದಸ್ಯ ಎಂ. ಎಸ್. ಮಹಮ್ಮದ್ ಹೇಳಿದರು.
ಅವರು ಮಂಗಳವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪೊಲೀಸರನ್ನು ಗೌರವಿಸುವುದಿಲ್ಲ. ಚುನಾವಣೆಯ ಸಂದರ್ಭ ಎಲ್ಲೆಡೆ ಕೋಮು ಪ್ರಚೋದನೆ ಮಾಡಿ, ಗಲಭೆ ಆರಂಭಿಸಿ, ಒಂದು ವರ್ಗವನ್ನು ಓಲೈಸುವ ಕಾರ್ಯತಂತ್ರ ರೂಪಿಸುತ್ತದೆ. ಪ್ರತಿಭಾವಂತರೂ ಪ್ರಬುದ್ಧರೂ ಆದ ಈ ಜಿಲ್ಲೆಯ ಮತದಾರರು ಬಿಜೆಪಿಯ ಈ ಚುನಾವಣೆ ರಾಜಕೀಯವನ್ನು ನಂಬುವುದಿಲ್ಲ ಎಂದು ಅವರು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಸಚಿವ ರೈ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಉಳಿಸಿಕೊಂಡಿಲ್ಲ. ಅವರು ಜಿಲ್ಲೆಗೆ ಬೆಂಕಿ ಹಚ್ಚುವಂತ ಕ್ಷುಲ್ಲಕ ಹೇಳಿಕೆ ನೀಡಿದ್ದಲ್ಲದೇ ಒಂದು ವರ್ಗದ ಮೇಲೆ ಆರೋಪ ಮಾಡಿದ್ದರು. ಆದರೆ ಪೊಲೀಸರ ತನಿಖೆಯಿಂದ ನೈಜ ಆರೋಪಿಯನ್ನು ಬಂಧಿಸಲಾಯಿತು. ಆಗ ನಳಿನ್ ಅವರೇ ರಾಜೀನಾಮೆ ನೀಡಬೇಕಾಗಿತ್ತು ಎಂದು ಅವರು ಹೇಳಿದರು.
ಸಚಿವ ರಮಾನಾಥ ರೈ ಅವರು ಎಸ್‌ಪಿ ಜತೆ ಮಾತನಾಡುವುದಕ್ಕಿಂತ ಮುನ್ನ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಎಸ್‌ಪಿ ಅವರ ಜತೆ ಕಲ್ಲಡ್ಕ ಘಟನೆ ಬಗ್ಗೆ ಮಾತನಾಡಲಿಲ್ಲವೇ? ಅವರು ರಾಜಕೀಯ ಮುತ್ಸದ್ಧಿ ಸಚಿವ ರೈ ಅವರಿಗೆ ಪಾಠ ಹೇಳುವ ಆವಶ್ಯಕತೆಯಿಲ್ಲ ಎಂದು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ರೈ ಅವರ ವಿರುದ್ಧ ಸ್ಪರ್ಧಿಸಿ, ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ೧೮ ಸಾವಿರ ಮತಗಳಿಂದ ಸೋತಿದ್ದಾರೆ. ಈಗ ಮುಗ್ಧ ಮುಸಲ್ಮಾನರ ಓಲೈಕೆಗಾಗಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಮುಸಲ್ಮಾನ ಬಾಂಧವರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಚಿಂತಿಸುವ ಶಕ್ತಿಯಿದೆ. ಮುಂದಿನ ಚುನಾವಣೆಗೆ ಸ್ಪರ್ಧಿಸಿ, ಗೆಲ್ಲುವ ಹಗಲಕನಸು ಕಾಣುವುದು ಬೇಡ. ಅವರು ೧೮ ಸಾವಿರಕ್ಕಿಂತ ಅಧಿಕ ಮತಗಳಿಂದ ಮತ್ತೆ ಸೋಲಲಿದ್ದಾರೆ ಎಂದು ಎಂ. ಎಸ್. ಭವಿಷ್ಯ ನುಡಿದರು.
ಪೊಲೀಸರು ನಿಷ್ಪಕ್ಷಪಾತ ಕ್ರಮಕೈಗೊಳ್ಳಬೇಕು. ಅಮಾಯಕರನ್ನು ಬಂಧಿಸಬಾರದು. ನಾವು ಪೊಲೀಸರಿಗೆ ನೈತಿಕ ಧೈರ್ಯ ತುಂಬುತ್ತೇವೆ ಹೊರತು ಬೆದರಿಸುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ವಿಟ್ಲ ಗ್ರಾ. ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಉಮಾನಾಥ ಶೆಟ್ಟಿ, ವಿಟ್ಲ ಪ. ಪಂ. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಸದಸ್ಯ ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ ಅವರು ಉಪಸ್ಥಿತರಿದ್ದರು.

Related posts

Leave a Reply