Breaking News

ಗಾಂಜಾ ಸಾಗಾಟ: ರಿಕ್ಷಾ ಸಹಿತ ಚಾಲಕ ಸೆರೆ

ಉಳ್ಳಾಲ: ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ರೆಂಜಾಡಿ ಮಸೀದಿ ಬಳಿ ನಿವಾಸಿ ಎ.ಅನ್ಸಾರ್ (28) ಬಂಧಿತ.ಈತ ದೇರಳಕಟ್ಟೆ ಕಾನಕೆರೆಯಿಂದ ಬರುತ್ತಿದ್ದ ರಿಕ್ಷಾ ಪೊಲೀಸ್ ಜೀಪನ್ನು ಕಂಡ ಕೂಡಲೇ ಅತಿವೇಗವಾಗಿ ಚಲಿಸಲು ಆರಂಭವಾಗಿತ್ತು. ಸಂಶಯಗೊಂಡ ಪೊಲೀಸರು ಬೆನ್ನಟಿದಾಗ ರಿಕ್ಷಾವನ್ನು ಅಲ್ಲೇ ಬಿಟ್ಟು ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಪರಾರಿಯಾಗಲು ಯತ್ನಿಸಿದ್ದ. ಆದರೆ ಬೆಂಬಿಡದ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅತನ ಕೈಯಲ್ಲಿದ್ದ ೩೫೦ ಗ್ರಾಂ ಗಾಂಜಾ ಹಾಗೂ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಗಾಂಜಾ ಸರಬರಾಜು ಮಾಡುತ್ತಿದ್ದ ಉಪ್ಪಳದ ಮುನೀರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

Related posts

Leave a Reply