Header Ads
Header Ads
Header Ads
Breaking News

ಗಾಂಧೀಜಯಂತಿ ಹಿನ್ನಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಉಡುಪಿಯ ಮಿಶನ್ ಆಸ್ಪತ್ರೆಯಲ್ಲಿ ಆಯೋಜನೆ 8 ವಿವಿಧ ಸಂಘ ಸಂಸ್ಥೆಗಳು ಭಾಗಿ

ಗಾಂಧೀ ಜಯಂತಿ ಆಚರಣೆಯ ಹಿನ್ನಲೆಯಲ್ಲಿ ದೇಶದಾದ್ಯಂತ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮಗಳು ನಡೆದರೆ ಉಡುಪಿಯಲ್ಲೂ ಸ್ವಚ್ಚತಾ ದಿನ ವನ್ನು ವಿನೂತನ ರೀತಿಯಲ್ಲಿ ಆಚರಿಸಿದ್ದು ಕಂಡು ಬಂತು. ಉಡುಪಿಯ ಮಿಶನ್ ಆಸ್ಪತ್ರೆಯಲ್ಲಿ ರೋಟರಿ ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಹಾಗೂ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಸಭೆಯನ್ನು ಉದ್ದೆಶಿಸಿ ಮಾತನಾಡಿದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಸ್ವಚ್ಚತೆಯ ಕಲ್ಪನೆ ಬರೀ ಮನೆಗಳಿಗೆ ಸೀಮಿತವಾಗಿದೆ.ತಮ್ಮ ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಸ್ವಚ್ಚತೆಯ ಕಲ್ಪನೆ ಇಡೀ ಸಮಾಜದಲ್ಲಿ ಹರಡಬೇಕು. ಮನೆ, ಪರಿಸರ ಮಾತ್ರವಲ್ಲದೇ ಆಸ್ಪತ್ರೆಗಳ ಸ್ವಚ್ಚತೆ ಅಗತ್ಯವಾಗಿದೆ ಎಂದರು. ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ಆಸ್ಪತ್ರೆಯ ಮಾಜಿ ನಿರ್ದೇಶಕಿ ಪ್ರೇಮಾಕುಂದರ್, ಡಾ.ಸುರೇಶ್ ಶೆಣೈ, ಡಾ.ಗಣೇಶ್ ಕಾಮತ್, ರವಿರಾಜ್ ಮುಂತಾದವರು ಉಪಸ್ಥಿತರಿದ್ದರು. ನಮ್ಮ ಮನೆ ನಮ್ಮ ಮರ ಅಭಿಯಾನದ ಅಂಗವಾಗಿ ಆಸ್ಪತ್ರೆಯ ಆವರಣದಲ್ಲಿ ಗಿಡನೆಡಲಾಯಿತು. ಬಳಿಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ವರದಿ: ಪಲ್ಲವಿ ಸಂತೋಷ್

Related posts

Leave a Reply