Header Ads
Header Ads
Header Ads
Breaking News

ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಭಾರತ ಸೇವಾದಳ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ ಇಂದು ಪುರಭವನ ಮುಂಭಾಗದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಯಿತು. ಶಾಸಕ ಜೆ.ಆರ್.ಲೋಬೋ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ತಹಶಿಲ್ದಾರ್ ಗುರುಪ್ರಸಾದ್, ಸೇವಾದಳದ ಫ್ರಾನ್ಸಿಸ್, ಮಂಜೇಗೌಡ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ಪೌರಕಾಮಿ೯ಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರುದ್ರಪ್ಪ ಅವರನ್ನು ಗೌರವಿಸಲಾಯಿತು.ಗಾಂಧಿ ಜಯಂತಿ ಪ್ರಯುಕ್ತ ವಾತಾ೯ ಮತ್ತು ಸಾವ೯ಜನಿಕ ಸಂಪರ್ಕ ಇಲಾಖೆಯು ಹೊರತಂದ ಜನಪದ ವಿಶೇಷಾಂಕವನ್ನು ಶಾಸಕರು ಬಿಡುಗಡೆಗೊಳಿಸಿದರು ನಂತರ ಪುರಭವನದಲ್ಲಿ ಗಾಂಧೀ ಭಜನೆಗಳ ಹಾಗೂ ಗಾಂಧೀಜಿಯವರ ಪ್ರಿಯವಾದ ಭಕ್ತಿಗೀತೆಗಳ ಗಾಯನ ನಡೆಯಿತು.

Related posts

Leave a Reply