Header Ads
Header Ads
Breaking News

ಗಾಢ ನಿದ್ರೆಗೆ ಜಾರಿದ ಕಾರ್ಕಳ ಪುರಸಭೆ. ಕಾರ್ಕಳ ನಗರ ಭಾಗದಲ್ಲಿನ ರಸ್ತೆಗಳ ಶೋಚನೀಯ ಸ್ಥಿತಿ.

ಕಾರ್ಕಳ ನಗರ ಪುರಸಭೆ ವ್ಯಾಪ್ತಿಯ ಪೇಟೆ ಭಾಗದಲ್ಲಿನ ಎಸ್‌ವಿಟಿ, ಸಾಲ್ಮಾರ ಜರಿಗುಡ್ಡೆ ತಾಲೂಕು ಕಚೇರಿ ರಸ್ತೆಗಳ ಮದ್ಯೆ ಮರಣ ಗುಂಡಿಗಳಾಗಿ ಎರಡು ತಿಂಗಳು ಕಳೆದರೂ ಇನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ವರವಾಗಲೇ ಇಲ್ಲ. ಇದರ ಪರಿಣಾಮ ದಿನಕ್ಕೊಂದು ವಾಹನಗಳು ಅಪಘಾತಗೀಡಾಗುತ್ತಿದೆ.ಕೆಲವು ವಾಹನ ಸವಾರ ವಾಹನ ಚಲಾವಣೆಗೆ ಸಾದ್ಯವಾಗದೇ ಪರದಾಟ ನಡೆಸುತ್ತಿದ್ದಾರೆ. ಇನ್ನು ಕೆಲವರು ರಸ್ತೆಯನ್ನು ಹುಡುಕುತ್ತಾ ತಮ್ಮ ಪಥವನ್ನು ಬಿಟ್ಟು ಬೇರೆ ಪಥದತ್ತ ಸಾಗುತ್ತಾ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ.ಜರಿಗುಡ್ಡೆ ವಾರ್ಡ್ ರಲ್ಲಿ ರಸ್ತೆಯೇ ಇಲ್ಲದೇ ಇಂದಿಗೆ ಹತ್ತು ವರ್ಷ ಕಳೆದಿದೆ. ಅಲ್ಲಿನ ಜನತೆ ಮಾತ್ರ ಜನಪತ್ರಿನಿಧಿಗಳಿಗರ ದಿನೇದಿನೇ ಶಾಪ ಇಡುತ್ತಿದ್ದಾರೆ. ಕಾರಣ ಚುನಾವಣೆ ಮುಗಿದ ಬಳಿಕ ಆ ವಾರ್ಡ್‌ನತ್ತ ಸುಳಿಯದ ಜನಪತ್ರಿನಿಧಿಗಳು. ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ, ಮತ ಯಾಚನೆ ಬಂದ ಅಭ್ಯರ್ಥಿಗಳಿಗೆ ಮಂಗಳಾರತಿ ಎತ್ತುವ ಮೂಲಕ ಉಗಿಯುತ್ತಿರುವುದು ಕಂಡುಬಂದಿದೆ.ಇನ್ನು ಕಾರ್ಕಳ ನಗರದದ ಮದ್ಯಪೇಟೆಯಲ್ಲಿ ಲಕ್ಷಗಟ್ಟಲೆ ಹಣ ಸುರಿಸಿ ಪುರಸಭೆಯಿಂದ ಚರಂಡಿ ನಿರ್ಮಾಣ ಮಾಡಲಾಗಿದ್ದು ,ಇದೀಗ ಸ್ಥಳಿಯ ಅಂಗಡಿ ಮಾಲಿಕರು ತಮ್ಮ ಅಂಗಡಿಯ ಮುಂ ಬಾಗದಲ್ಲಿ ಚರಂಡಿಗೆ ಹರಿಯುವ ನೀರನ್ನು ತಡೆಯುವ ಮೂಲಕ ನೀರು ರಸ್ತೆಯಲ್ಲೇ ಹರಿದು ರಸ್ತೆ ಕಾಣದಂತಾಗಿದೆ. ಇನ್ನು ಇದೇ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು, ಶಾಲಾಕಾಲೇಜು ವಾಹನಗಳು ತೆರಳುತ್ತಿದ್ದು ಹಲವಾರು ಮಂದಿ ಈ ಮರಣ ಗುಂಡಿಗೆ ಬಿದ್ದು ಬಲಿಯಾಗುತ್ತಿದ್ದಾರೆ.ಅಷ್ಟೇ ಅಲ್ಲದೆ, ಕಾರ್ಕಳ ಪುರಸಭೆ ರಸ್ತೆಯು ಸಾವಿರಾರು ಹೊಂಡ ಗುಂಡಿಗಳಿಂದ ಕೂಡಿದ್ದರೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ತಾತ್ಕಾಲಿಕ ಪರಿಹಾರ ಒದಗಿಸದ ಹಿನ್ನಲೆಯಲ್ಲಿ ಸ್ಥಳೀಯ ಸಮಾಜಸೇವಕ ವಿಜೇಂದ್ರ ಕಿಣಿಯವರು ಸ್ವತಃ ತಮ್ಮ ವಾಹನದಲ್ಲಿ ಹೊಡೆದ ಹಂಚುಗಳನ್ನು ತಂದು ಹೊಂಡಕ್ಕೆ ತುಂಬಿಸುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ.

Related posts

Leave a Reply