Header Ads
Breaking News

ಗಾಯಗೊಂಡಿದ್ದ ಗೂಳಿ ಸಾವು : ಸಮಾಜಸೇವಕ ವಿಶು ಶೆಟ್ಟಿ ನೇತೃತ್ವದಲ್ಲಿ ಅಂತಿಮ ಸಂಸ್ಕಾರ

 ಮೇ25 ರ ನಡುರಾತ್ರಿ ಗೂಳಿಯೊಂದಕ್ಕೆ ವಾಹನ ಬಡಿದು ಗಂಭೀರ ಗಾಯಗೊಂಡು ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನ ಬಳಿ ನಡೆದಿದೆ. ಗಂಭೀರ ಗಾಯಗೊಂಡ ಗೂಳಿಗೆ ವಿಷಯ ತಿಳಿದ ವಿಶು ಶೆಟ್ಟಿ ತಕ್ಷಣ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೂಳಿ ನಿನ್ನೆ ಮಧ್ಯಾಹ್ನ ಮೃತಪಟ್ಟಿದೆ. ನಂತರ ವಿಶು ಶೆಟ್ಟಿಯವರು ಜೆಸಿಬಿ ತರಿಸಿ ಮೃತಗೂಳಿಯ ಅಂತ್ಯ ಸಂಸ್ಕಾರ ನಡೆಸಿದರು. ಪೆಟ್ಟಾದ ಪಶುಗಳಿಗೆ ತುರ್ತು ಚಿಕಿತ್ಸೆಗೆ ಮೂಲ ಸೌಕರ್ಯಗಳಿಲ್ಲದ ಕಾರಣ ಅದೆಷ್ಟೋ ಗೋವು ನಾನಾ ಕಾರಣಗಳಿಂದ ದುರಂತಕ್ಕೀಡಾದಾಗ ಗೋವುಗಳು ಅನುಭವಿಸುವ ಹಿಂಸೆ, ನರಕಯಾತನೆ ಹೇಳತೀರದು. ಉಡುಪಿಯ ಕೃಷ್ಣನ ನಾಡಲ್ಲಿ ಗೋವುಗಳ ರಕ್ಷಣೆಯ ಬಗ್ಗೆ ಇನ್ನಷ್ಟು ಕೆಲಸಗಳು ಆಗಬೇಕಿದೆ. ಆದಕ್ಕಾಗಿ ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಗಳು, ಸರಕಾರ ದುರಂತಕ್ಕಿಡಾದ ಗೋವುಗಳ ರಕ್ಷಣಿಯ ಬಗ್ಗೆ ಮೂಲಭೂತ ಸೌಕರ್ಯ ಹಾಗೂ ಚಿಕಿತ್ಸೆ ನೀಡುವುದರ ಮೂಲಕ ಸೌಲಭ್ಯ ಒದಗಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *