Header Ads
Header Ads
Breaking News

ಗಾಳಿ ಮಳೆಗೆ ಉಡುಪಿ ಜಿಲ್ಲೆ ತತ್ತರ

ನಿನ್ನೆ ತಡ ರಾತ್ರಿ ಸುರಿದ ಭಾರೀ ಗಾಳಿಮಳೆಗೆ ಉಡುಪಿ ತತ್ತರಿಸಿದೆ. ಗುಡುಗು ಸಹಿತ ಭಾರೀ ಗಾಳಿ ಬೀಸಿದ್ದು ಉಡುಪಿ ಜನ ಜೀವನ ಅಸ್ತವ್ಯಸ್ಥವಾಗಿದೆ. ನಗರದ ಉದ್ಯಾವರ, ಪಿತ್ರೋಡಿ ಭಾಗವಂತೂ ಗಾಳಿಯ ಆರ್ಭಟಕ್ಕೆ ನಲುಗಿ ಹೋಗಿವೆ. ಭಾರೀ ಗಾಳಿಗೆ ಮರಗಳು ರಸ್ತೆಯಲ್ಲೇ ಉರುಳಿ ಬಿದ್ದಿದ್ದು ವಿದ್ಯುತ್ ಕಂಬಗಳೂ ಸಹ ತುಂಡಾಗಿ ರಸ್ತೆ ಪಾಲಾಗಿದೆ.

ಉಡುಪಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ವಿದ್ಯು ತ್ ಕಡಿತವಾಗಿದೆ. ಮನೆಗಳ ಮೇಲೆ, ಭಜನಾಮಂದಿರ, ಪಂಚಾಯತ್ ಕಟ್ಟಡಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು ಅಪಾರ ಹಾನಿ ಸಂಭವಿಸಿದೆ.

Related posts

Leave a Reply