Header Ads
Header Ads
Breaking News

ಗಾಳಿ ಮಳೆಗೆ ಮನೆಗಳ ಮೇಲೆ ಬಿದ್ದ ಮರ

ಮಂಗಳೂರಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಗಳ ಮೇಲೆ ಮರ ಬಿದ್ದ ಘಟನೆ ಹಂಪನಕಟ್ಟಯಲ್ಲಿ ನಡೆದಿದೆ. ಮುಂಜಾನೆ ಸುರಿದ ಗಾಳಿ ಮಳೆಗೆ ಹಂಪನಕಟ್ಟೆಯ ಐತಪ್ಪ ಶೆಟ್ಟಿ ಕೌಂಪೌಂಡಿನಲ್ಲಿರುವ ಎರಡು ಮನೆಯ ಮೇಲೆ ಬೃಹತ್ ಮರ ಬಿದ್ದು ಎರಡೂ ಮನೆಗಳು ಜಖಂಗೊಂಡಿದೆ.

ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗ್ನಿಶಾಮಕ ದಳ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮರ ತೆರವು ನಡೆಸುತ್ತಿದ್ದಾರೆ. ಅಲ್ಲದೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಲ್ಲದೆ, ಸ್ಥಳದಲ್ಲಿ ಇದ್ದು ತೆರವು ಕಾರ್ಯ ಮಾಡಿಸಿದರು.

Related posts

Leave a Reply