Header Ads
Header Ads
Breaking News

ಗಿಡ ಪೊದರುಗಳಿಂದ ಆವೃತ್ತವಾಗಿದ್ದ ಮಂಜೇಶ್ವರದ ಜಿಎಲ್‌ಪಿ ಶಾಲೆ : ವಿ4 ನ್ಯೂಸ್ ವರದಿಗೆ ಎಚ್ಚೆತ್ತ ಪಂಚಾಯತ್ ಅಧಿಕಾರಿಗಳು

ಮಂಜೇಶ್ವರದ ಜಿಎಲ್‌ಪಿ ಶಾಲೆಯ ಸುತ್ತಮುತ್ತ ಗಿಡ ಪೊದರುಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಭಯದ ವಾತಾವರಣದಲ್ಲಿ ಶಾಲಾ ಮಕ್ಕಳು ಪಾಠ ಕೇಳುವಂತಹ ಪರಿಸ್ಥಿತಿ ಬಂದೋದಗಿತ್ತು. ಈ ಸಮಸ್ಯೆಯ ಬಗ್ಗೆ ವಿ೪ ನ್ಯೂಸ್ ಸಮಗ್ರ ವರದಿ ಬಿತ್ತರಿಸಿತ್ತು. ಇದೀಗ ಕೂಡಲೇ ಎಚ್ಚೆತ್ತ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ವರದಿಗೆ ಸ್ಪಂಧಿಸಿದ ಪಂಚಾಯತು ಅಧಿಕಾರಿಗಳು ಗ್ರಾ. ಪಂ. ನ ಅಧೀನದಲ್ಲಿರುವ ಹದಿನೇಳು ಶಾಲಾ ಮುಖ್ಯೋಪಾಧ್ಯಾಯರು ಹಾಗು ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಕರೆಸಿ ತುರ್ತು ಸಭೆ ನಡೆಸಿ ಅವರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಗ್ರಾ. ಪಂ. ಅಧ್ಯಕ್ಷ ಅಜೀಜ್ ಹಾಜಿ ಹಾಗೂ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಇವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿತ್ತು. ಈ ಸಂದರ್ಭ ಗ್ರಾ. ಪಂ.ಹಾಗೂ ಬ್ಲಾಕ್ ಪಂ. ಸದಸ್ಯರುಗಳು ಪಾಲ್ಗೊಂಡಿದ್ದರು. ಕಾಡು ಪೊದರುಗಳು ಆವರಿಸಿರುವ ಶಾಲೆಗಳಲ್ಲಿ ರಕ್ಷಕ ಶಿಕ್ಷಕ ಸಂಘದ ನೇತೃತ್ವದಲ್ಲಿ ಈ ತಿಂಗಾಲ 30ಕ್ಕೆ ಮುಂಚಿತವಾಗಿ ಶುಚಿತ್ವ ನಡೆಸಿ ಮಕ್ಕಳಿಂದ ಹಾವಿನ ಭೀತಿಯನ್ನು ಹೋಗಲಾಡಿಸಿ ವಿದ್ಯಾರ್ಥಿಗಳಿಗೆ ಬೇಕಾದ ಜಾಗ್ರತೆಯನ್ನು ಪಾಲಿಸುವಂತೆ ಸಭೆಯಲ್ಲಿ ನಿರ್ದೇಶಿಸಲಾಯಿತು. ಇದಕ್ಕೆ ಬೇಕಾದ ಸರ್ವ ಸಹಕಾರವನ್ನು ಕೂಡಾ ಪಂ. ನೀಡುವುದಾಗಿ ಸಭೆಯಲ್ಲಿ ಅಧ್ಯಕ್ಷರುಗಳು ಭರವಸೆಯನ್ನು ನೀಡಿದರು. ಸಭೆಯಲ್ಲಿ ವಿದ್ಯಾಭ್ಯಾಸ ಡಾ ಪಂ. ಕಾರ್ಯದರ್ಶಿ ಬಾಸ್ಕರ, ಪಂ. ಉಪಾಧ್ಯಕ್ಷೆ ಶಶಿಕಲಾ , ಮುಕ್ತಾರ್, ಸಂಸಿನಾ, ಅಬ್ದುಲ್ಲಾ, ಸುಪ್ರಿಯ ಶೆಣೈ , ಹಸೀನಾ ಮೊದಲಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *