Header Ads
Breaking News

ವಕೀಲರನ್ನು ಉದ್ದೇಶಪೂರ್ವಕವಾಗಿ ತಮಾಷೆ ಮಾಡಿಲ್ಲ ನೋವಾಗಿರೋದ್ರಿಂದ ವಿಷಾಧಿಸುತ್ತೇವೆ : ಗಿರ್‌ಗಿಟ್ ಚಿತ್ರತಂಡ

ಗಿರಿಗಿಟ್ ಸಿನೆಮಾ ಆಗಸ್ಟ್ 23ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವಿಯಾಗಿ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಇದರಲ್ಲಿ ಇರುವ ಕೆಲವು ಸನ್ನಿವೇಶಗಳು ವಕೀಲರಿಗೆ ನೋವುಂಟ ಮಾಡಿದೆ ಎಂದು ಮಂಗಳೂರು ವಕೀಲರ ಸಂಘದಿಂದ ದಾವೆ ಹೂಡಲಾಗಿದೆ. ಆದರೆ ಸಿನಿಮಾದಲ್ಲಿ ವಕೀಲರನ್ನು ಉದ್ದೇಶ ಪೂರ್ವಕವಾಗಿ ತಮಾಷೆ ಮಾಡಿಲ್ಲ ಎಂದು ಚಿತ್ರ ತಂಡ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಟ ರೂಪೇಶ್ ಶೆಟ್ಟಿಯವರು, ಕೋರ್ಟ್ ಆದೇಶಕ್ಕೆ ಚಿತ್ರತಂಡ ಬದ್ಧವಾಗಿದೆ. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ ಹಾಗೂ ಮನರಂಜನೆಗೆ ಸೀಮಿತವಾಗಿರುತ್ತದೆ. ಆದರೆ ಇದರಿಂದಾಗಿ ವಕೀಲರಿಗೆ ನೋವಾಗಿರುವುದರಿಂದ ಈ ಬಗ್ಗೆ ವಿಷಾಧಿಸುತ್ತೇವೆ. ಆದಷ್ಟು ಬೇಗ ಇದನ್ನು ಬಗೆಹರಿಸುತ್ತೇವೆ ಹಾಗೂ ಇದು ಬಗೆಹರಿಯುತ್ತೆ ಎಂದು ಹೇಳಿದರು.ಈ ಸಂದರ್ಭ ಗಿರಿಗಿಟ್ ಚಿತ್ರತಂಡದ ನಿರ್ದೇಶಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *