Header Ads
Breaking News

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂಸದೆ ಶೋಭಾ ಸಂತಾಪ

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.ಕನ್ನಡ ನಾಡಿನ ಪುತ್ರ ಇಂದು ನಮ್ಮ ಜೊತೆಗಿಲ್ಲ. ಬಿಜೆಪಿ ಸಂತಾಪ ವ್ಯಕ್ತಪಡಿಸುತ್ತೆ ಅಂದರು. ಇನ್ನು ಉಡುಪಿಯ ಮಣಿಪಾಲದಲ್ಲಿ ತಮ್ಮ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದರು. ಇನ್ನು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹೋರಾಟಮಾಡಲಿದ್ದು, ಜೂ.14 ರಿಂದ ರಾಜ್ಯದ ಬಿಜೆಪಿ ಶಾಸಕರಿಂದ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಈ ಹೋರಾಟ ಮಾಡುತ್ತೇವೆ…ಒಂದೋ ರಾಜ್ಯ ಸರ್ಕಾರ ರಾಜಿನಾಮೆ ಕೊಟ್ಡು ಮನೆಗೆ ಹೋಗ್ಬೇಕು,ಕೆಲಸ ಮಾಡುವ ಶಕ್ತಿ ಇಲ್ಲ ಅಂದ್ರೆ ಮನೆಗೆ ಹೋಗ್ಲಿ ಅಲ್ಲಿಯವರೆಗೆ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಎಚ್ಚರಿಸಿದರು.

ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಶವ ಪೆಟ್ಟಿಗೆಗೆ ಕೊನೆಯ ಮುಳ್ಳು ಹೊಡೆದಂತಾಗಲಿದೆ ಈ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ.ರಾಮಲಿಂಗ ರೆಡ್ಡಿ, ಬೇಗ್, ಸೋಮಶೇಖರ್ ವಿರೋಧ ಮಾಡಿದ್ದಾರೆ.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.ಅಭಿವೃದ್ಧಿ ಕೆಲಸವೇ ಆಗ್ತಿಲ್ಲ ಅಂತ ಕಾಂಗ್ರೆಸ್ ಶಾಸಕರೇ ಹೇಳ್ತಾರೆ.ಸಚಿವ ಸಂಪುಟ ವಿಸ್ತರಣೆ ನಂತರ ಸಮಸ್ಯೆ ಉಲ್ಬಣಗೊಳ್ಳುತ್ತೆ.ಅದಕ್ಕಾಗಿ ನಾವು ಕಾದುನೋಡ್ತಾ ಇದೀವಿ ಎಂದರು.ಭೂಸ್ವಾಧಿನ ಪ್ರಕ್ರಿಯೆಯಲ್ಲಿ ರಾಜ್ಯದ ಜನತೆಗೆ ಮೋಸವಾಗ್ತಿದೆ ಎಂದರು.

ರಾಜ್ಯ ಸರ್ಕಾರದ ಒಪ್ಪಂದ ಪಾಲಿಸದ ಜಿಂದಾಲ್ ಕಂಪೆನಿಗೆ ಅನುಕೂಲ ಮಾಡ್ತಿದೆ.ಜಿಂದಾಲ್ ಕಂಪೆನಿಗೆ 3, 666 ಎಕರೆಗೆ ಶುದ್ದ ಕ್ರಯಪತ್ರ ನೀಡಲು ಮುಂದಾಗಿದೆ. ರೈತರಿಗೆ ಮೋಸ ಮಾಡಿ ಕಂಪೆನಿಗೆ ಅನುಕೂಲ ಮಾಡಿ ಕೊಟ್ಟಿದೆ. ಇದರಲ್ಲಿ ಕಮಿಷನ್ ಏಜೆಂಟರ ಕೈವಾಡ ಇದೆ. ಈ ಬಗ್ಗೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

Related posts

Leave a Reply

Your email address will not be published. Required fields are marked *